Tuesday, May 21, 2024

Latest Posts

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

- Advertisement -

Health Tips: ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣುಗಳಲ್ಲಿ ಸೀಬೆ ಹಣ್ಣು ಕೂಡ ಒಂದು. ಅದೇ ರೀತಿ ಸೀಬೆ ಹಣ್ಣಿನಲ್ಲಿ ಹಲವು ಆರೋಗ್ಯಕರ ಗುಣಗಳಿರುವ ಕಾರಣಕ್ಕೆ, ವಾರಕ್ಕೆ ಮೂರರಿಂದ ನಾಲ್ಕು ಸೀಬೆ ಹಣ್ಣು ತಿಂದರೂ ಉತ್ತಮ. ಹಾಗಾದ್ರೆ ಸೀಬೆಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮಳೆಗಾಲದಲ್ಲಿ ಬರುವ ಸೀಸನಲ್ ಫ್ರೂಟ್ ಆಗಿರುವ ಸೀಬೆ ಹಣ್ಣನ್ನು ಜನ ಸಾಮಾನ್ಯ ಹಣ್ಣೆಂದು ಭಾವಿಸುತ್ತಾರೆ. ಆದರೆ ಇದು ಆರೋಗ್ಯ ಲಾಭಗಳ ಖಜಾನೆಯಾಗಿದೆ. ಹಾಗಾಗಿಯೇ ಇದನ್ನು ಅಮೃತ ಫಲವೆಂದು ಕರೆಯುತ್ತಾರೆ. ನೀವು ಹೆಚ್ಚು ದುಡ್ಡು ಕೊಟ್ಟು ಖರೀದಿಸುವ ಹಣ್ಣಿಗಿಂತಲೂ ಈ ಸೀಬೆಹಣ್ಣು ಆರೋಗ್ಯಕರವಾಗಿರುತ್ತದೆ.

ಮಧುಮೇಹ ಇದ್ದವರು, ಸೀಬೆ ಹಣ್ಣಿನ ಸೇವನೆ ಮಾಡಬೇಕು. ಇದರಿಂದ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ. ಮನೆಯಲ್ಲೇ ಸೀಬೆ ಹಣ್ಣಿನ ಮರವಿದ್ದಲ್ಲಿ, ನೀವು ಪ್ರತಿದಿನ ಒಂದು ಸೀಬೆಹಣ್ಣಿನ ಸೇವನೆ ಮಾಡಬಹುದು. ಆದರೆ ಹಣ್ಣನ್ನು ಖರೀದಿಸಿ ತರುವುದಿದ್ದರೆ, ವಾರಕ್ಕೆ ಮೂರು ಸೀಬೆ ಹಣ್ಣಿನ ಸೇವನೆ ಮಾಡಬಹುದು. ಏಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಸೀಬೆಹಣ್ಣು ಹೈಬ್ರೀಡ್ ಆಗಿರುತ್ತದೆ.

ಎರಡನೇಯದಾಗಿ ಸೀಬೆಹಣ್ಣು ಮತ್ತು ಅದರ ಎಲೆ ಎರಡೂ ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ರಕ್ತನಾಳಗಳಲ್ಲಿ ರಕ್ತಸಂಚಾರ ಉತ್ತಮವಾಗಿ ಆಗಲು ಸಹಕರಿಸುತ್ತದೆ. ಹಾಗಾಗಿ ಸೀಬೆಹಣ್ಣಿನ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹೊರತೆಗೆದು, ಉತ್ತಮ ಕೊಲೆಸ್ಟ್ರಾಲ್ ಉತ್ಪತ್ತಿಯಾಗಲು ಸಹಕರಿಸುತ್ತದೆ.

ಮೂರನೇಯದಾಗಿ ಮುಟ್ಟಿನ ಸಮಸ್ಯೆ ಇರುವ ಹೆಣ್ಣು ಮಕ್ಕಳು ಸೀಬೆಹಣ್ಣಿನ ಸೇವನೆ ಮಾಡಬೇಕು. ಇದರಿಂದ ಮುಟ್ಟಾದ ವೇಳೆ ಹೆಚ್ಚು ಹೊಟ್ಟೆ ನೋವಿನ ಸಮಸ್ಯೆ ಬರುವುದಿಲ್ಲ. ಅಲ್ಲದೇ ಸೀಬೆ ಎಲೆಯನ್ನು ನೀರಿನಲ್ಲಿ ಕುದಿಸಿ, ಕಶಾಯ ಮಾಡಿ ಸೇವಿಸುವುದರಿಂದಲೂ ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಸಿಗುತ್ತದೆ.

ನಾಲ್ಕನೇಯದಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸೀಬೆ ಹಣ್ಣು ಸಹಕಾರಿಯಾಗಿದೆ. ಸೀಬೆಹಣ್ಣಿನ ಸೇವನೆಯಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಗ ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ನಮ್ಮ ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿ ಭಾಗದಲ್ಲಿ ತಿಳಿಯೋಣ..

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

- Advertisement -

Latest Posts

Don't Miss