Health Tips: ಆರೋಗ್ಯಕರ ಮತ್ತು ರುಚಿಕರ ತರಕಾರಿಗಳಲ್ಲಿ ಸೌತೇಕಾಯಿ ಕೂಡ ಒಂದು. ಹಾಗಾಗಿಯೇ ಸೌತೇಕಾಯಿಯನ್ನು ಸಲಾಡ್ ರೂಪದಲ್ಲಿ ತಿನ್ನಲಾಗುತ್ತದೆ. ಆದರೆ ಸೌತೇಕಾಯಿಯಿಂದ ಬರೀ ಲಾಭವಷ್ಟೇ ಅಲ್ಲದೇ, ನಷ್ಟವೂ ಉಂಟು. ಹಾಗಾದ್ರೆ ಸೌತೇಕಾಯಿ ಸೇವನೆಯಿಂದ ಯಾಕೆ ಮತ್ತು ಹೇಗೆ ನಷ್ಟವಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಸೌತೇಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಏಕೆಂದರೆ ಸೌತೇಕಾಯಿಯಲ್ಲಿ ಶೇ.95 ರಷ್ಟು ನೀರಿರುತ್ತದೆ. ಹಾಗಾಗಿ ಇದರ ಸೇವನೆಯಿಂದ ದೇಹದಲ್ಲಿ ಹೈಡ್ರೇಶನ್ ಲೆವಲ್ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇದರ ಸೇವನೆ ಮಾಡಲಾಗುತ್ತದೆ. ಇದನ್ನು ಲಿಮಿಟಿನಲ್ಲಿ ಸೇವಿಸಿದರೆ, ಮುಖದ ಸೌಂದರ್ಯ, ಕೂದಲ ಸೌಂದರ್ಯ ಹೆಚ್ಚಾಗುತ್ತದೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ, ಸೌತೇಕಾಯಿ ಸೇವನೆ ಮಾಡಬೇಕು. ಇದು ದೇಹದಲ್ಲಿರುವ ಪಿತ್ತವನ್ನು ಶಾಂತ ಮಾಡುವುದರಿಂದ, ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಲ್ಲದೇ, ಹೃದಯದ ಆರೋಗ್ಯವನ್ನೂ ಇದು ಚೆನ್ನಾಗಿಟ್ಟಿರುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು, ಸೌತೇಕಾಯಿ ಸಹಕಾರಿಯಾಗಿದೆ.
ತೂಕ ಇಳಿಸುವವರು ಸೌತೇಕಾಯಿ ಸೇವನೆ ಮಾಡಿದ್ರೆ ಉತ್ತಮ. ಇದರ ನಿಯಮಿತ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲಾಗುವುದಿಲ್ಲ. ಮಲಮೂತ್ರ ವಿಸರ್ಜನೆ ಸರಿಯಾಗಿ ಆಗಲು ಸೌತೇಕಾಯಿ ಸೇವನೆ ಸಹಕಾರಿಯಾಗಿದೆ.
ಇನ್ನು ಸೌತೇಕಾಯಿ ಸೇವನೆಯಿಂದ ನಷ್ಟ ಯಾರಿಗೆ ಎಂದರೆ, ಸೌತೇಕಾಯಿ ತಿಂದರೆ ಅಲರ್ಜಿ ಎನ್ನುವವರಿಗೆ ನಷ್ಟವಾಗುತ್ತದೆ. ಗುಳ್ಳೆ, ನವೆ, ದೇಹದ ಭಾಗ ಉಬ್ಬಿಕೊಳ್ಳುವುದು, ವಾತ ದೋಷ, ಕಫ ದೋಷವಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಕೈ ಕಾಲು ನೋವು, ಮೂಳೆ ನೋವು ಉಂಟಾಗುತ್ತದೆ.
ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?