Tuesday, April 30, 2024

Latest Posts

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

- Advertisement -

Health Tips: ಹುಟ್ಟಿದ ಮಗುವಿನ ಆರೈಕೆ ಹೇಗಿರಬೇಕು ಎಂಬ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಇದೀಗ ಮಗುವಿಗೆ ಯಾವ ರೀತಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸುವಾಗ ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಶಿಶುವಿಗೆ ಬಿಸಿ ಬಿಸಿ ನೀರಿನ ಸ್ನಾನವನ್ನು ಎಂದಿಗೂ ಮಾಡಿಸಬಾರದು. ಅದೇ ರೀತಿ ಆ ನೀರು ತೀರಾ ತಣ್ಣಗೂ ಇರಬಾರದು. ಶಿಶುವಿನ ದೇಹ ತಡೆದುಕೊಳ್ಳುವಷ್ಟು ಉಗುರು ಬೆಚ್ಚಗಿದ್ದರೆ ಸಾಕು. ಕೆಲವರು ಮಗುವಿಗೆ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸಿದರೆ, ಅದು ನೆಮ್ಮದಿಯಾಗಿ ಮಲಗುತ್ತದೆ ಎಂಬ ಕಾರಣಕ್ಕೆ, ಬಿಸಿ ಬಿಸಿ ನೀರಿನಿಂದ ಮಗುವಿಗೆ ಸ್ನಾನ ಮಾಡಿಸುತ್ತಾರೆ. ಆಗ ಮಗು ನೋವಿನಿಂದ ನರಳಾಡುತ್ತದೆ. ಅದಕ್ಕೆ ಉತ್ತಮ ನಿದ್ರೆ ಬರಬಹುದು. ಆದರೆ ಅದರ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಮಗುವಿಗೆ ಎಂದಿಗೂ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸಬಾರದು.

ಅಲ್ಲದೇ, ಕೆಲ ಹಳೆಯ ಕಾಲದ ಕೆಲವರು, ಮಗುವಿನ ದೇಹದಿಂದ ಕಫ ತೆಗೆಯಬೇಕು ಎಂದು ಬಾಯಿಗೆ ಬೆರಳು ಹಾಕುತ್ತಾರೆ. ಆದರೆ ಇದು ತಪ್ಪು. ಹೀಗೆ ಎಂದಿಗೂ ಮಾಡಬಾರದು. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ಚಿಕಿತ್ಸೆ ಕೊಡಿಸಬೇಕು. ಇಲ್ಲವಾದಲ್ಲಿ, ಬಾಯಿಗೆ ಬೆರಳು ಹಾಕಿದಾಗ, ಅವರ ಉಗುರು ಮಗುವಿನ ಗಂಟಲಿಗೆ ತಾಕಿ, ಮಗುವಿಗೆ ಹಾನಿಯಾಗುತ್ತದೆ. ರಕ್ತ ವಾಂತಿಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ತಪ್ಪನ್ನು ಯಾರೂ ಮಾಡಬಾರದು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss