Friday, September 20, 2024

Latest Posts

ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು..?

- Advertisement -

Health Tips: ಮುಟ್ಟು ಎಂದರೆ, ಹೆಣ್ಣಿನ ದೊಡ್ಡ ಆರೋಗ್ಯ ಸಮಸ್ಯೆ. ಹಾಗಾಗಿಯೇ ಪುರುಷರು ಹೆಣ್ಣು ಮುಟ್ಟಾದಾಗ, ಆಕೆಯೊಂದಿಗೆ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ಹೇಳುವುದು. ಇನ್ನು ಎಲ್ಲ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಮಕ್ಕಳಾದ ಬಳಿಕ ಸಿಕ್ಕಾಪಟ್ಟೆ ಹೊಟ್ಟೆ ನೋವು ಬರುತ್ತದೆ. ಇನ್ನು ಕೆಲವರಿಗೆ ಮಕ್ಕಳು ಹುಟ್ಟುವವರೆಗಷ್ಟೇ ಹೊಟ್ಟೆ ನೋವಿರುತ್ತದೆ. ಹೀಗೆ ಬೆನ್ನು ನೋವು, ಸೊಂಟ ನೋವು ಸೇರಿ ಹಲವು ಆರೋಗ್ಯ ಸಮಸ್ಯೆಗಳು ಬರುತ್ತದೆ. ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗುವುದಿಲ್ಲ. ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ಹಾಗಾದ್ರೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು ಎಂಬ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ, ನಿಮ್ಮ ದೇಹದ ತೂಕ ಹೆಚ್ಚಾಗಿರಬಹುದು ಅಥವಾ ಕಡಿಮೆ ಇರಬಹುದು. ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದಿದವರಿಗೆ ಮತ್ತು ಅತೀ ಕಡಿಮೆ ತೂಕ ಹೊಂದಿದವರಿಗೆ ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ ಮುಟ್ಟಾಗುವುದಿಲ್ಲ.

ಎರಡನೇಯ ಕಾರಣ, ಥೈರಾಯ್ಡ್‌ ಸಮಸ್ಯೆ ಇರಬಹುದು. ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗುವುದಿಲ್ಲ. ಪಿಸಿಓಡಿ, ಪಿಸಿಓಎಸ್ ಸಮಸ್ಯೆ ಇದ್ದವರಿಗೂ ಇದೇ ರೀತಿ ಆಗುತ್ತದೆ. ಹಾಗಾಗಿ ನಿಮಗೂ ಸಮಯಕ್ಕೆ ಸರಿಯಾಗಿ ಮುಟ್ಟಾಗದಿದ್ದಲ್ಲಿ, ಪರೀಕ್ಷಿಸಿ, ಚಿಕಿತ್ಸೆ ಪಡೆಯುವುದು ಉತ್ತಮ.

ಮೂರನೇಯ ಕಾರಣ ಹೆಚ್ಚು ಟೆನ್ಶನ್, ಕೆಲಸದ ವಿಷಯ, ಮನೆಯಲ್ಲಿ ಜಗಳ ಹೀಗೆ ಹಲವಾರು ವಿಷಯಗಳಿಗೆ ಹೆಚ್ಚು ಚಿಂತೆ ಮಾಡಿದಾಗ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಾದಾಗ, ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ಆಗ ಮುಟ್ಟಿನ ಸಮಸ್ಯೆ ಎದುರಾಗುತ್ತದೆ.

ನಾಲ್ಕನೇಯ ಕಾರಣ, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಇಲ್ಲದಿರುವುದು. ನಾವು ಸಮಯಕ್ಕೆ ತಕ್ಕಂತೆ ಆರೋಗ್ಯಕರ ಆಹಾರ ಸೇವಿಸಿದಾಗ, ಹೆಚ್ಚು ನೀರು ಕುಡಿದಾಗ, ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಆದರೆ ಆ ಪೋಷಕಾಂಶಗಳ ಕೊರತೆಯುಂಟಾದಾಗ, ಮುಟ್ಟಿನ ಸಮಸ್ಯೆ ಎದುರಾಗುತ್ತದೆ.

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

- Advertisement -

Latest Posts

Don't Miss