Recipe: ದೋಸೆ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಗರಿಗರಿ ದೋಸೆ, ರುಚಿ ರುಚಿ ಚಟ್ನಿ. ಆದ್ರೆ ಅದನ್ನು ತಯಾರಿಸುವ ಗೃಹಿಣಿಗೆ ನೆನಪಿಗೆ ಬರುವುದು ಮಾತ್ರ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೆನೆಸಿ, ಸ್ವಚ್ಛಗೊಳಿಸಿ, ರುಬ್ಬಿ ಹಿಟ್ಟು ತಯಾರಿಸಿ, ಮರುದಿನ ದೋಸೆ ರೆಡಿ ಮಾಡುವುದು. ಹಾಗಾಗಿ ಎಷ್ಟೋ ಜನ ದೋಸೆ ಮಾಡುವ ಕೆಲಸಕ್ಕೇ ಹೋಗುವುದಿಲ್ಲ. ಅಥವಾ ದೋಸೆ ಹಿಟ್ಟು ಮಾಡಿ, ಫ್ರಿಜ್‌ನಲ್ಲಿರಿಸಿ, ವಾರಗಟ್ಟಲೇ ದೋಸೆ ಮಾಡಿಕೊಂಡು ತಿನ್ನುತ್ತಾರೆ. ಆದರೆ ನಾವಿಂದು ಇನ್‌ಸ್ಟಂಟ್ ಆಗಿ ಮಾಡಬಹುದಾದ, ದೋಸೆ ಬಗ್ಗೆ ಹೇಳಲಿದ್ದೇವೆ.
ಈ ದೋಸೆ ಮಾಡಲು ಬೇಕಾಗುವ ಸಾಮಗ್ರಿ ಎಂದರೆ, 1 ಕಪ್ ಕಪ್ಪು ಕಡಲೆಯ ಹಿಟ್ಟು, ಉಪ್ಪು, ಚಿಟಿಕೆ ಅರಿಶಿನ ಮತ್ತು ಖಾರದ ಪುಡಿ, ಅಗತ್ಯವಿದ್ದಷ್ಟು ನೀರು. ಇವಿಷ್ಟನ್ನು ಸೇರಿಸಿ, ಮಿಕ್ಸ್ ಮಾಡಿ ಬ್ಯಾಟರ್ ತಾರಿಸಿ, 15 ನಿಮಿಷ ಪಕ್ಕಕ್ಕಿರಿಸಿ. ಈಗ ಇದಕ್ಕಾಗಿ ಮಸಾಲೆ ತಯಾರಿಸಿಕೊಳ್ಳಿ. ಪ್ಯಾನ್ ಬಿಸಿ ಮಾಡಲು ಇಟ್ಟು, ಎಣ್ಣೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಇಂಗು, ಹಸಿಮೆಣಸು, ಒಂದು ಸಣ್ಣಗೆ ಕೊರೆದ ಈರುಳ್ಳಿ, ಇವೆಲ್ಲ ಹಾಕಿ ಹುರಿದುಕೊಳ್ಳಿ. ಬಳಿಕ ಉಪ್ಪು, ಧನಿಯಾಪುಡಿ, ಆಮ್ಚುರ್ ಪುಡಿ, ಪೆಪ್ಪರ್ ಪುಡಿ ಮತ್ತು ಅರಿಶಿನ ಪುಡಿಯನ್ನೂ ಸೇರಿಸಿ. ಬಳಿಕ ಬೇಯಿಸಿದ 2 ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಸೇರಿಸಿ. ಮೇಲಿನಿಂದ ಕೊತ್ತೊಂಬರಿ ಸೊಪ್ಪನ್ನು ಹಾಕಿದ್ರೆ, ಪಲ್ಯ ರೆಡಿ.
ಈಗ ರೆಡಿ ಮಾಡಿಟ್ಟುಕೊಂಡ ಹಿಟ್ಟಿನಿಂದ ದೋಸೆ ತಯಾರಿಸಿ, ಇದರ ಮೇಲೆ ತುಪ್ಪ ಮತ್ತು ಆಲೂಗಡ್ಡೆ ಪಲ್ಯ ಹಾಕಿ, ಚಟ್ನಿಯೊಂದಿಗೆ ಸವಿಯಲು ಕೊಡಿ. ಇದರೊಂದಿಗೆ ಚಟ್ನಿಪುಡಿ ಇದ್ದರೆ ಇನ್ನೂ ರುಚಿಯಾಗಿರುತ್ತದೆ.
ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?
ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?