Beauty Tips: ನಾವು ಈಗಾಗಲೇ ನಿಮಗೆ ಹಲವು ರೀತಿಯ ಬ್ಯೂಟಿ ಟಿಪ್ಸ್, ಸೇರಮ್, ಫೇಸ್‌ಪ್ಯಾಕ್, ಸ್ಕ್ರಬರ್ ಹೇಗೆ ತಯಾರಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಬನಾನಾ ಫೇಸ್‌ಪ್ಯಾಕ್ ಹೇಗೆ ತಯಾರಿಸಬೇಕು ಎಂದು ಹೇಳಲಿದ್ದೇವೆ.
ಇಲ್ಲಿ ಫೇಸ್‌ಪ್ಯಾಕ್ ತಯಾರಿಸಲು ಬರೀ ಎರಡೇ ಎರಡು ಸಾಮಗ್ರಿ ಬೇಕು. ಒಂದು ಬಾಳೆಹಣ್ಣು ಮತ್ತು ಕೊಂಚ ಜೇನುತುಪ್ಪ. ಇವೆರಡನ್ನೇ ಬಳಸಿ ನೀವು ಈ ಫೇಸ್‌ಪ್ಯಾಕ್ ತಯಾರಿಸಬಹುದು. ಬಾಳೆಹಣ್ಣು ನಮ್ಮ ಸ್ಕಿನ್ ಸ್ಮೂತ್ ಆಗಲು ಸಹಾಯ ಮಾಡುತ್ತದೆ. ಗ್ಲೋ ಕೊಡುತ್ತದೆ. ಇನ್ನು ಜೇನುತುಪ್ಪ ನಿಮ್ಮ ಸ್ಕಿನ್ ಗ್ಲೋ ಆಗಲು ಸಹಾಯ ಮಾಡುತ್ತದೆ.
ನೀವು ಬಾಳೆಹಣ್ಣು ತೆಗೆದುಕೊಂಡು, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಬೌಲ್‌ಗೆ ಹಾಕಿ. ಮ್ಯಾಶ್ ಮಾಡಿ. ಬಳಿಕ ಇದಕ್ಕೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿದ್ರೆ. ಫೇಸ್‌ಪ್ಯಾಕ್ ರೆಡಿ. ಇದನ್ನು ಮುಖಕ್ಕೆ ಅಪ್ಲೈ ಮಾಡೋಕಿಂತ ಮುನ್ನ ಪ್ಯಾಚ್ ಟೆಸ್ಟ್ ಮಾಡಿ. ಇನ್ನು ನಿಮಗೆ ಇದರಿಂದ ಅಲರ್ಜಿ ಇಲ್ಲವೆಂದಲ್ಲಿ, ನೀವು ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು, ಬಳಿಕ ಈ ಪೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಈ ಫೇಸ್‌ಪ್ಯಾಕ್ ಒಣಗಲು ಶುರುವಾಗುತ್ತದೆ. ಆಗ ನಿಮ್ಮ ಮುಖವನ್ನು ಸ್ವಚ್ಚವಾಗಿ ತೊಳೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..


