Health Tips: ಶುಗರ್ ಬಂದ್ರೆ ಏನಾಗತ್ತೆ..? ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಸಮಸ್ಯೆ ಉದ್ಭವವಾಗತ್ತೆ..? ಶುಗರ್ ಇದ್ದವರು ಹೇಗೆ ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಶುಗರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ. ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಡಯಾಬಿಟೀಸ್ ಬಂದರೆ, ತುಂಬಾ ಬಾಯಿ ಒಣಗುತ್ತದೆ. ಬಾಯಾರಿಕೆ ಹೆಚ್ಚಾಗಿ, ಹೆಚ್ಚು ನೀರು ಕುಡಿಯಲು ಶುರು ಮಾಡುತ್ತಾರೆ. ಜೊತೆಗೆ ಯೂರಿನ್ ಕೂಡ ಹೆಚ್ಚು ಪಾಸ್ ಆಗುತ್ತದೆ. ಜೊತೆಗೆ ಊಟದ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇಂಥ ಲಕ್ಷಣ ಕಂಡು ಬಂದಲ್ಲಿ ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ.
ಡಾ.ಪವನ್ ಕುಮಾರ್ ಅವರು ಡಯಾಬಿಟೀಸ್ ಬಗ್ಗೆ ಮಾತನಾಡಿದ್ದು, ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್ ಬಗ್ಗೆ ಮಾತನಾಡಿದ್ದಾರೆ. ಟೈಪ್ 1 ಅಂದ್ರೆ ಮಕ್ಕಳಲ್ಲಿ ಬರುವ ಡಯಾಬಿಟೀಸ್. ಇದನ್ನು ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟೀಸ್ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಚಿಕ್ಕ ಮಕ್ಕಳಲ್ಲಿ ಇನ್ಸುಲಿನ್ ಇರುವುದಿಲ್ಲ. ಹಾಗಾಗಿ ಅವರಿಗೆ ಇನ್ಸುಲಿನ್ ನೀಡುವ ಅಗತ್ಯ ಹೆಚ್ಚಿದೆ. ಏಕೆಂದರೆ ಮಕ್ಕಳಿಗೆ ಮಾತ್ರೆ ಕೊಡಲಾಗುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ಇನ್ಸುಲಿನ್ ಕೊಡಲಾಗುತ್ತದೆ.
ಇನ್ನು ಟೈಪ್ 2 ಡಯಾಬಿಟೀಸ್ ಮಧ್ಯ ವಯಸ್ಕರಲ್ಲಿ ಅಥವಾ ವಯಸ್ಸಾದವರಿಗೆ ಬರುವ ಖಾಯಿಲೆ.ಈ ವಯಸ್ಸಿನಲ್ಲಿ ನಮ್ಮ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಆದ್ರೆ ಅದು ಪೂರ್ಣ ಮಟ್ಟದಲ್ಲಿ ನಮಗೆ ಸಾಕಾಗುವುದಿಲ್ಲ. ಹಾಗಾಗಿ ಈ ವಯಸ್ಸಿನಲ್ಲಿ ಶುಗರ್ ಬಂದಾಗ, ಇನ್ಸುಲಿನ್ ಜೊತೆ ಮಾತ್ರೆಯ ಅಗತ್ಯತೆಯೂ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

