Health Tips: ಸದ್ಯ ಟ್ರೆಂಡಿಂಗ್‌ನಲ್ಲಿರುವ ಟ್ರೀಟ್ಮೆಂಟ್ ಅಂದ್ರೆ ಲೇಸರ್ ಟ್ರೀಟ್‌ಮೆಂಟ್. ಮುಖದ ಅಂದವನ್ನು ಹೆಚ್ಚಿಸಿಕೊಳ್ಳೋಕ್ಕೆ ಅಂತಾನೇ, ಹಲವರು ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಈ ಟ್ರೀಟ್ಮೆಂಟ್ ಒಮ್ಮೆ ತೆಗೆದುಕೊಂಡರೆ, ಜೀವನ ಪೂರ್ತಿ ಇದರ ಎಫೆಕ್ಟ್ ಇರತ್ತಾ..? ಅಥವಾ ಪದೇ ಪದೇ ಲೇಸರ್ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕಾ ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ದೀಪಿಕಾ ಈ ಬಗ್ಗೆ ಮಾತನಾಡಿದ್ದು, ಲೇಸರ್ ಟ್ರೀಟ್ಮೆಂಟ್ ಪರ್ಮನೆಂಟ್ ಅಲ್ಲಾ ಎಂದು ಹೇಳಿದ್ದಾರೆ. ಅಲ್ಲದೇ ಲೇಸರ್ ಟ್ರೀಟ್‌ಮೆಂಟ್ 1ರಿಂದ 8 ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಈ ವೇಳೆ ತ್ವಚೆಯ ಮೇಲೆ ಬೆಳೆದಿರುವ ಕೂದಲು, ಪರ್ಮನೆಂಟ್ ಆಗಿ ಹೋಗುವುದಿಲ್ಲ. ಬದಲಾಗಿ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ.
ಲೇಸರ್ ಟ್ರೀಟ್‌ಮೆಂಟ್ ಮುಗಿದ ಬಳಿಕ, ಮತ್ತೆ ಅದೇ ಸೌಂದರ್ಯ ಮೆಂಟೇನ್ ಮಾಡಲು, ಟಚ್ ಅಪ್ ಸಲುವಾಗಿಯೂ ಹೋಗಬೇಕಾಗುತ್ತದೆ. ಆದರೆ ಲೇಸರ್ ಟ್ರೀಟ್ಮೆಂಟ್ ಮಾಡಿಸುವುದರಿಂದ ತ್ವಚೆಯ ಮೇಲಿನ ಕೂದಲು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..