Health Tips: ಎಷ್ಟು ಬಗೆಯ ಕ್ಯಾನ್ಸರ್ ಗಳಿದೆ.. ಯಾವ ಕ್ಯಾನ್ಸರ್ ನಿಂದ ಜನ ಹೆಚ್ಚು ಬಳಲುತ್ತಿದ್ದಾರೆ.. ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ವೈದ್ಯರು ಇಂದು ಲಿವರ್ ಕ್ಯಾನ್ಸರ್ ಅಂದ್ರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ ಹೇಳುವಂತೆ, ಲಿವರ್ ಅನ್ನೋದು ಮನುಷ್ಯನ ದೇಹದ ಮುಖ್ಯವಾದ ಅಂಗವಾಗಿದೆ. ನಾವು ತಿನ್ನುವ ಆಹಾರವನ್ನು ಜೀರ್ಣ ಮಾಡಲು, ನಾವು ತೆಗೆದುಕೊಂಡ ಮಾತ್ರೆಯನ್ನು ಇಡೀ ದೇಹಕ್ಕೆ ಪಸರಿಸಲು ಲಿವರ್ ಸಹಕಾರಿಯಾಗಿದೆ. ಇಂಥ ಮುಖ್ಯವಾದ ಅಂಗವಾಗಿರುವ ಲಿವರ್‌ನಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಾಗ, ಲಿವರ್ ಕ್ಯಾನ್ಸರ್ ಆಗುತ್ತದೆ.
ಲಿವರ್ ಕ್ಯಾನ್ಸರ್‌ನಲ್ಲಿ ಎರಡು ವಿಧಗಳಿದೆ. ಒಂದು ಲಿವರ್‌ನಲ್ಲೇ ಕ್ಯಾನ್ಸರ್ ಆಗಿರುತ್ತದೆ. ಎರಡನೇಯದ್ದು ಕ್ಯಾನ್ಸರ್ ಲಿವರ್‌ಗೆ ಸ್ಪ್ರೆಡ್ ಆಗಿರುತ್ತದೆ. ಲಿವರ್‌ನಲ್ಲೇ ಕ್ಯಾನ್ಸರ್ ಆಗುವುದನ್ನು ಪ್ರೈಮರಿ ಲಿವರ್ ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ದೇಹದ ಬೇರೆ ಭಾಗದಲ್ಲಿ ಕ್ಯಾನ್ಸರ್ ಆಗಿ, ಅದು ಲಿವರ್‌ಗೆ ಸ್ಪ್ರೆಡ್ ಆದಾಗ, ಅದನ್ನು ಸೆಕೆಂಡರಿ ಕ್ಯಾನ್ಸರ್ ಅನ್ನಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಇನ್ನೂೆ ಹೆಚ್ಚಿನ ಮಾಹಿತಿಯನ್ನು ವೈದ್ಯರಿಂದ ತಿಳಿಯಲು ಈ ವೀಡಿಯೋ ನೋಡಿ..