Health Tips: ಕಣ್ಣಿನ ಆರೋಗ್ಯ ಹೇಗಿರಬೇಕು..? ಕನ್ನಡಕ ಬಳಸುವಾಗ ಯಾವ ಎಚ್ಚರಿಕೆ ಇರಬೇಕು ಅನ್ನೋ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ತಿಳಿಸಿದ್ದಾರೆ. ಇದೀಗ, ಕಣ್ಣಿನ ರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡಾಗ, ನಮ್ಮ ಕಣ್ಣುಗಳಉ ಕೂಡ ಆರೋಗ್ಯವಾಗಿ ಇರುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನಾವು ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಕೆಲವು ಕೆಲಸಗಳನ್ನು ಮಾಡಬಾರದು.
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಮಾಡಬಹುದಾದ ಕೆಲಸಗಳು ಎಂದರೆ, ನಾವು ಉತ್ತಮ ಆಹಾರಗಳನ್ನು ಸೇವಿಸಬೇಕು. ಹಸಿರು ಸೊಪ್ಪು. ತರಕಾರಿ, ಕ್ಯಾರೆಟ್, ಮೊಟ್ಟೆ, ನೆನೆಸಿಟ್ಟ ಒಣ ಹಣ್ಣುಗಳನ್ನು ಸೇವಿಸಬೇಕು. ಇನ್ನು ಯೋಗ, ವ್ಯಾಯಮಗಳನ್ನು ಕೂಡ ಮಾಡುವುದರಿಂದ, ನಮ್ಮ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.
ಇನ್ನು ಕಣ್ಣಿನ ಆರೋಗ್ಯ ಕಾಪಾಡಲು ಯಾವ ಕೆಲಸಗಳನ್ನು ಮಾಡಬಾರದು ಎಂದರೆ, ಕಣ್ಣುಗಳನ್ನು ಪದೇ ಪದೇ ಉಜ್ಜಿಕೊಳ್ಳಬಾರದು. ಧೂಮಪಾನ, ಮದ್ಯಪಾನಗಳ ಸೇವನೆ ಮಾಡಲೇಬಾರದು. ಏಕೆಂದರೆ, ಇದು ಬರೀ ಕಿಡ್ನಿ, ಲಿವರ್ ಅಷ್ಟೇ ಅಲ್ಲದೇ, ಕಣ್ಣಿನ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಅಲ್ಲದೇ, ಸಿಕ್ಕ ಸಿಕ್ಕ ಔಷಧಿಗಳನ್ನು ನೀವು ಕಣ್ಣಿಗೆ ಹಾಕಬಾರದು ಅಂತಾರೆ ವೈದ್ಯರು. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು, ವೈದ್ಯರು ಇನ್ನೂ ಹಲವು ಟಿಪ್ಸ್ ಕೊಟ್ಟಿದ್ದಾರೆ. ಅದೇನೆಂದು ತಿಳಿಯಲು ಈ ವೀಡಿಯೋ ನೋಡಿ..




