Tuesday, April 1, 2025

Latest Posts

IVF ಅಂದ್ರೆ ಏನು?: ಈ ಸಂತಾನ ಚಿಕಿತ್ಸೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಸಮಸ್ಯೆ ಇದ್ದವರು, IVF ಚಿಕಿತ್ಸೆ ಪಡೆದು ಸಂತಾನ ಪಡೆಯುತ್ತಿದ್ದಾರೆ. ಆದರೆ ಈ ಚಿಕಿತ್ಸೆ ತೆಗೆದುಕೊಂಡ ಎಲ್ಲರಿಗೂ, ಮಕ್ಕಳಾಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಏಕೆಂದರೆ, ಈ ಚಿಕಿತ್ಸೆ ಸಕ್ಸಸ್ ಆದವರಿಗೆ ಮಾತ್ರ ಮಕ್ಕಳಾಗುತ್ತದೆ. ಹಾಗಾದ್ರೆ ಐವಿಎಫ್ ಎಂದರೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..

ವೈದ್ಯೆಯಾದ ವಿದ್ಯಾ ಭಟ್ ಈ ಬಗ್ಗೆ ವಿವರಿಸಿದ್ದು, ಐವಿಎಫ್ ಚಿಕಿತ್ಸೆಯ ಬಗ್ಗೆ ವಿವರಣೆ ನೀಡಿದ್ದಾರೆ. ಐವಿಎಫ್ ಚಿಕಿತ್ಸೆಗೂ ಮುನ್ನ, ಪತಿ ಪತ್ನಿ ಇಬ್ಬರ ಆರೋಗ್ಯವನ್ನು, ವೀರ್ಯಾಣು, ಅಂಡಾಣುವನ್ನು ಟೆಸ್ಟ್ ಮಾಡಲಾಗುತ್ತದೆ. ಅದರಲ್ಲಿ ಏನೂ ಸಮಸ್ಯೆ ಇಲ್ಲದಿದ್ದಲ್ಲಿ, IUI ಚಿಕಿತ್ಸೆ ತೆಗೆದುಕೊಳ್ಳಲು ಹೇಳುತ್ತೇವೆ. ಇವೆಲ್ಲವೂ ಸಾಧ್ಯವಾಗದಿದ್ದಲ್ಲಿ ಮಾತ್ರ, ಐವಿಎಫ್ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಹೆಣ್ಣಿನಲ್ಲಿ ಚೆನ್ನಾಗಿ ಅಂಡಾಣು ಉತ್ಪತ್ತಿಯಾಗಲಿ ಎಂದು ಇಂಜೆಕ್ಷನ್ ನೀಡಲಾಗುತ್ತದೆ. 10ರಿಂದ 12 ಅಂಡಾಣುಗಳು ಉತ್ಪತ್ತಿಯಾದ ಬಳಿಕ, 34 ಗಂಟೆಯಲ್ಲಿ ಅನಸ್ತೇಷಿಯಾ ಕೊಟ್ಟು, ಆ ಅಂಡಾಣುವನ್ನು ಹೊರ ತೆಗೆದು, ಲ್ಯಾಬ್‌ಗೆ ಕಳಿಸಲಾಗುತ್ತದೆ. ಹೆಣ್ಣಿನ ಅಂಡಾಣುವನ್ನು ಮತ್ತು ಪುರುಷನ ವೀರ್ಯಾಣುವಿನಲ್ಲಿ ಒಂದು ಸ್ಪರ್ಮ್ ತೆಗೆದುಕೊಂಡು, ಲ್ಯಾಬ್‌ನಲ್ಲಿ ಸೇರಿಸಿ, ಅದನ್ನು ಹೆಣ್ಣಿನ ಗರ್ಭಕೋಶದಲ್ಲಿ ಇರಿಸಲಾಗುತ್ತದೆ.

ಬಳಿಕ 2ವಾರವಾದ ಮೇಲೆ, ಪ್ರೆಗ್ನೆನ್ಸಿ ಚೆಕಪ್ ಮಾಡಲಾಗುತ್ತದೆ. ಚಿಕಿತ್ಸೆ ಫಲಕಾರಿಯಾಗಿದ್ದಲ್ಲಿ, ಆ ಮಹಿಳೆ ತನ್ನ ಆರೋಗ್ಯವನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕು. ಆಗಲೇ ಆರೋಗ್ಯಕರವಾಗಿ, ಮಕ್ಕಳಾಗಲು ಸಾಧ್ಯವಾಗುತ್ತದೆ. ಐವಿಎಫ್ ಚಿಕಿತ್ಸೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಅನ್ನೋ ಬಗ್ಗೆ ಈ ವೀಡಿಯೋ ನೋಡಿ…

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

‘ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸಿದೆ ಜೀನಿ’

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

- Advertisement -

Latest Posts

Don't Miss