Hubballi News: ಹುಬ್ಬಳ್ಳಿ: ಮಹಿಳೆಯರನ್ನು ಅಟ್ಟಾಡಿಸಿ ಇಟ್ಟಂಗಿ, ಚಪ್ಪಲಿಯಿಂದ ಥಳಿಸಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಇಂದು ಮುಂಜಾನೆ ನಡೆದಿದೆ.
ಈ ಘಟನೆಗೆ ಅನೈತಿಕ ಸಂಬಂಧ ಕಾರಣ ಎಂದು ಹೇಳಲಾಗಿದ್ದು. ಹಲ್ಲೆಗೊಳಗಾದ ಮಹಿಳೆ ಹಾಗೂ ಹಲ್ಲೆ ಮಾಡಿದ ವ್ಯಕ್ತಿ ನಡುವೆ ಅಕ್ರಮ ಸಂಬಂಧ ಇದ್ದಿದ್ದಾಗಿ ತಿಳಿದಿದೆ. ವ್ಯಕ್ತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಆರೋಪ ಮಾಡಿದ ವ್ಯಕ್ತಿಯ ಕುಟುಂಬಸ್ಥರು, ಸುಮಾರು 10 ವರ್ಷಗಳಿಂದ ಕಿಮ್ಸ್ ನಲ್ಲಿ ಈ ಮಹಿಳೆ ಆಯಾ ಕೆಲಸ ಮಾಡುತ್ತಿದ್ದಾಗಿ ಹೇಳಿದ್ದಾರೆ.
ಕೆಲಸದಿಂದ ಮನೆಗೆ ಹೊರಡುವ ವೇಳೆ ವ್ಯಕ್ತಿಯ ಕುಟುಂಬಸ್ಥರಿಂದ ರಸ್ತೆ ಮೇಲೆಹಲ್ಲೆ ಮಾಡಲಾಗಿದೆ.
ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ, ಮಕ್ಕಳಿಂದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ. ಮಹಿಳೆ ಮೇಲೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಸಹ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನ ಮೇಲೆಯೂ ಹಲ್ಲೆ ಮಾಡಲಾಗಿದೆ.
ಇಬ್ಬರ ಮೇಲೂ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗ ಥಳಿಸುವ ಜೊತೆಗೆ ಚಪ್ಪಲಿ ಹಾಗೂ ಇಟ್ಟಂಗಿಯಿಂದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಸಾರ್ವಜನಿಕರು ಕುಟುಂಬದ ಜಗಳ ಕುಟುಂಬದಲ್ಲಿ ಬಗೆಹರಿಸಿಕೊಳ್ಳಬೇಕು, ರಸ್ತೆ ಉದ್ದಕ್ಕೂ ಈ ತರ ಹೊಡೆದಾಟ ಮಾಡಬಾರದೆಂದು ಬುದ್ಧಿ ಮಾತು ಹೇಳಿದರು. ಪೊಲೀಸರು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ. ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’
ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..
‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’