Tuesday, October 14, 2025

Latest Posts

ಮಾರ್ಗಮಧ್ಯದಲ್ಲಿಯೇ ಕೆಟ್ಟು ನಿಂತ ಚಿಗರಿ: ಸಂಚಾರ ಅವ್ಯವಸ್ಥೆಗೆ ಆಕ್ರೋಶಗೊಂಡ ಜನರು

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಚಿಗರಿ ಸೇವೆ ವರವಾಗಿದೆಯೋ ಅಥವಾ ಶಾಪವಾಗಿದೆಯೋ ಗೊತ್ತಿಲ್ಲ. ಆದರೆ ಜನರು ಮಾತ್ರ ಚಿಗರಿ ಸೇವೆ ಪಡೆಯುವುದಕ್ಕಿಂತ ಅವ್ಯವಸ್ಥೆಯಿಂದಲೇ ಹೈರಾಣಾಗಿದ್ದಾರೆ.

ಓವರ್ ಸ್ಪೀಡ್ ಡ್ರೈವಿಂಗ್ ಹಾಗೂ ಎಲ್ಲೆಂದರಲ್ಲಿ ಅವ್ಯವಸ್ಥೆಯಿಂದ ಇತರೇ ವಾಹನ ಸವಾರರಿಗೆ ಆತಂಕವನ್ನುಂಟು ಮಾಡಿರುವ ಚಿಗರಿ ಬಸ್, ಈಗ ಆಯಕಟ್ಟಿನ ಜಾಗೆಯಲ್ಲಿಯೇ ಕೆಟ್ಟುನಿಂತು, ಸುಮಾರು ಮೂರು ಗಂಟೆಗಳ ಕಾಲ ತೆರವುಗೊಳ್ಳದೇ, ಇರುವುದು ಜನರಲ್ಲಿ ಅಸಮಾಧಾನ ಉಂಟಾಗುವಂತೆ ಮಾಡಿದೆ.‌

ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹಾಗೂ ಜನನಿಬಿಡ ಪ್ರದೇಶದಲ್ಲಿ ಒಂದಾಗಿರುವ ಸಾಯಿಬಾಬಾ ಮಂದಿರದ ಮುಂದೆ ಚಿಗರಿ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ. ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಇಕ್ಕಟ್ಟಾದ ಜಾಗದಲ್ಲಿ ವಾಹನ ಸವಾರಿ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ ಮೂರು ಗಂಟೆಗೂ ಅಧಿಕ ಕಾಲ ಚಿಗರಿ ಬಸ್ ಸ್ಥಳಾಂತರ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಸಾಕಷ್ಟು ಸಾರ್ವಜನಿಕರ ದೂರವಾಣಿ ಮೂಲಕ ದೂರು ಸಲ್ಲಿಸಿದ ನಂತರವೇ ತೆರವು ಕಾರ್ಯಾಚರಣೆಗೆ ಆಗಮಿಸಿದ ಸಿಬ್ಬಂದಿ ಬಸ್ಸನ್ನು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್

Crime News: ಉಡುಪಿ ತಾಯಿ- ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಬಂಧನ

”ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ’

- Advertisement -

Latest Posts

Don't Miss