Health Tips: ಕಣ್ಣಿನ ಆರೋಗ್ಯದ ಬಗ್ಗೆ ನಾವು ನಿಮಗೆ ಹಲವು ಹೆಲ್ತ್ ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಯಾವ ಯಾವ ಆಹಾರವನ್ನು ಸೇವಿಸಬೇಕು ಅಂತಲೂ ಹೇಳಿದ್ದೇವೆ. ಇಂದು ವೈದ್ಯರು ಕಣ್ಣು ಕೆಂಪಾದಾಗ, ಏಕೆ ನಾವು ವೈದ್ಯರ ಬಳಿ ಹೋಗಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕಣ್ಣಲ್ಲಿ ಅಲರ್ಜಿಯಾಗಿ, ಕಣ್ಣು ಕೆಂಪಾಗಬಹುದು. ಆಗ ನೀವೇ ಮನೆ ಮದ್ದು ಮಾಡಿಕೊಳ್ಳದೇ, ಒಮ್ಮೆ ವೈದ್ಯರು ಸಂಪರ್ಕಿಸಬೇಕು. ಇಲ್ಲವಾದಲ್ಲಿ, ನಿಮ್ಮ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅದು ಅಲರ್ಜಿಯಿಂದ ಕಣ್ಣು ಕೆಂಪಾಗಿದ್ದರೂ ಕೂಡ, ನೀವು ವೈದ್ಯರ ಬಳಿ ಹೋಗಬೇಕು. ಆಗ ವೈದ್ಯರು, ಸಣ್ಣ ಮಟ್ಟದಲ್ಲಿ ಯಾವುದಾದರೂ ಡ್ರಾಪ್ಸ್ ಕೊಟ್ಟು, ಅದನ್ನು ಸರಿ ಮಾಡುತ್ತಾರೆ. ನಿರ್ಲಕ್ಷ್ಯ ಮಾಡಿದ್ದಲ್ಲಿ, ನಿಮ್ಮ ಕಣ್ಣಿನ ಆರೋಗ್ಯಕ್ಕೆ ಕುತ್ತು ತರುವ ಸಂಭವವಿರುತ್ತದೆ.
ಕೆಲವೊಮ್ಮೆ ವಾತಾವರಣ, ಧೂಳಿನಿಂದಲೂ ಕಣ್ಣು ಕೆಂಪಾಗುವ ಸಾಧ್ಯತೆ ಇರುತ್ತದೆ. ಈ ರೀತಿ ಕಣ್ಣು ಕೆಂಪಗಗಾಲು ಹಲವು ಕಾರಣಗಳಿರುತ್ತದೆ. ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು, ಈ ವೀಡಿಯೋ ನೋಡಿ..