Health Tips: ಚರ್ಮದ ಖಾಯಿಲೆ, ತ್ವಚೆಯ ಆರೋಗ್ಯದ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ನಿಮಗೆ ಹಲವು ವಿಷಯಗಳನ್ನನು ಹೇಳಿದ್ದಾರೆ. ಅದರಂತೆ ಇಂದು ಅರ್ಟಿಕೇರಿಯಾ ಅನ್ನುವ ಗುಳ್ಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅರ್ಟಿಕೆರಿಯಾ ಅಂದ್ರೆ ಸೊಳ್ಳೆ ಕಚ್ಚಿದ ರೀತಿಯಲ್ಲಿ ಆಗುವ ಗುಳ್ಳೆಗಳು. ಇದು ತುಂಬಾ ಕಾಮನ್ ಗುಳ್ಳೆ. ಆದರೆ ಅರ್ಟಿಕೆರಿಯಾ ಆದಾಗ, ತುರಿಕೆ ಉಂಟಾಗುತ್ತದೆ. ಇದರಿಂದ ಸೈಡ್ ಎಫೆಕ್ಟ್ಸ್ ಏನೂ ಇರುವುದಿಲ್ಲ. ಆದರೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ ವೈದ್ಯರು.
ಇನ್ನು ಬೆವರು ಗುಳ್ಳೆ ಮತ್ತು ಅರ್ಟಿಕೆರಿಯಾ ಎರಡೂ ಬೇರೆ ಬೇರೆ ವಿಧದ ಗುಳ್ಳೆಗಳು. ಆಟಗಾರರಿಗೆ, ಬಿಸಿಲಿನಲ್ಲಿ ಹೆಚ್ಚು ದುಡಿಯುವವರಿಗೆ ಬೆವರು ಹೆಚ್ಚು ಹೋಗುತ್ತದೆ. ಅಂಥವರು ತ್ವಚೆಯ ಆರೋಗ್ಯವನ್ನು ನಿರ್ಲಕ್ಷಿಸಿದಾಗ ಆಗುವುದು ಬೆವರು ಗುಳ್ಳೆ. ಆದರೆ ಅರ್ಟಿಕೆರಿಯಾ ಬೆವರಿನಿಂದ ಆಗುವ ಗುಳ್ಳೆಯಲ್ಲ. ಅರ್ಟಿಕೇರಿಯಾ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..




