Health Tips: ಪೈಲ್ಸ್ ರೋಗದ ಲಕ್ಷಣವೇನು..? ಇದು ಹೇಗೆ ಬರುತ್ತೆ ಎಂಬ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇಂದು ಹರ್ನಿಯಾ ಎಂಬ ಸಮಸ್ಯೆ ಬಗ್ಗೆ ವೈದ್ಯರು ವಿವರಣೆ ನೀಡಲಿದ್ದಾರೆ. ಅದೇನು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಹೊಕ್ಕಳಿನ ಮೇಲ್ಭಾಗದಲ್ಲಿ ಒಂದು ಗುಳ್ಳೆಯ ಆಕಾರವಿರುತ್ತದೆ. ಇದು ದೇಹದ ಕೆಲವು ಭಾಗಗಳಲ್ಲಿ ಗ್ಯಾಪ್ ಹೆಚ್ಚಾಗಿ, ಆ ಭಾಗದಲ್ಲಿ ಗಂಟಿನ ರೀತಿ ಆಗುತ್ತದೆ. ಈ ಗಂಟಿಗೆ ನೋವಿರುವುದಿಲ್ಲ. ಮತ್ತು ಇದನ್ನು ನೀವು ಒತ್ತಿದಾಗ, ಅದು ರಬ್ಬರ್ ರೀತಿ ಒಳಗೆ ಹೋಗುತ್ತದೆ. ಇದನ್ನೇ ಹಾರ್ನಿಯಾ ಎಂದು ಹೇಳುತ್ತಾರೆ.
ವಯಸ್ಸಾದವರಿಗೆ ಹಾರ್ನಿಯಾ ಬರುವುದು ಕಾಮನ್. ಹಾಗಂತ ಯಂಗ್ ಇರುವವರಿಗೆ ಹರ್ನಿಯಾ ಬರುವುದೇ ಇಲ್ಲ ಅಂತಲ್ಲ. ಆದರೆ ಅಪರೂಪವಾಗಿರುತ್ತದೆ. ಹೆಚ್ಚು ಭಾರ ಎತ್ತಿ ಕೆಲಸ ಮಾಡುವವರಿಗೆ ಹಾರ್ನಿಯಾ ಬರುತ್ತದೆ. ಇನ್ನು ಮದ್ಯಪಾನ, ಧೂಮಪಾನ ಮಾಡುವವರಿಗೂ ಹಾರ್ನಿಯಾ ಬರುತ್ತದೆ. ಇದಕ್ಕೆ ಎಷ್ಟು ಆಗತ್ತೋ, ಅಷ್ಟು ಬೇಗ ಚಿಕಿತ್ಸೆ ತೆಗೆದುಕೊಳ್ಳಬೇಕು. ಹರ್ನಿಯಾದಲ್ಲೂ ಹಲವು ವಿಧಗಳಿದೆ. ಆ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅವರ ವಿವರಣೆ ಕೇಳಲು ಈ ವೀಡಿಯೋ ನೋಡಿ..