ಮನೆಯಲ್ಲೇ ಈಸಿಯಾಗಿ ತಯಾರಿಸಿ ಶಾಹಿ ಪನೀರ್ ಪಲಾವ್

Recipe: ಇಂದು ನಾವು ಮನೆಯಲ್ಲೇ ಈಸಿಯಾಗಿ ಶಾಹಿ ಪನೀರ್ ಪಲಾವ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನು ತಯಾರಿಸೋದು ಹೇಗೆ..? ಇದನ್ನು ತಯಾರಿಸಲು ಏನೇನು ಸಾಮಗ್ರಿ ಬೇಕು ಎಂದು ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಬಾಸ್ಮತಿ ಅಕ್ಕಿ, 3 ಸ್ಪೂನ್ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಪಲಾವ್ ಎಲೆ,  ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕ್ಯಾರೇಟ್, ಬೀನ್ಸ್, ಹಸಿಬಟಾಣಿ, ಪನೀರ್, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಪೆಪ್ಪರ್ ಪುಡಿ, ಜೀರಿಗೆ ಪುಡಿ, ಉಪ್ಪು, ಬಿರಿಯಾನಿ ಮಸಾಲೆ, ಬೆಣ್ಣೆ, ಕೊಂಚ ಗೋಡಂಬಿ, ದ್ರಾಕ್ಷಿ, ಪಿಸ್ತಾ, ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದ ಬಾದಾಮಿ. ಹಾಲಿನಲ್ಲಿ ನೆನೆಸಿದ ಕೇಸರಿ.

ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು, ಕೊಂಚ ನೆನೆಸಿ, ಉದುರು ಉದುರಾಗಿ ಬೇಯಿಸಿ ಅನ್ನ ತಯಾರಿಸಿಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ, ಬೆಣ್ಣೆ ಹಾಕಿ, ಗೊಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಪನೀರ್, ಈರುಳ್ಳಿಯನ್ನು ಹುರಿದಿಟ್ಟುಕೊಳ್ಳಬೇಕು.

ನಂತರ ಕುಕ್ಕರ್ ಬಿಸಿ ಮಾಡಿ, ತುಪ್ಪ ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಪಲಾವ್ ಎಲೆ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಕ್ಯಾರೇಟ್, ಬಟಾಣಿ, ಬೀನ್ಸ್ ಹಾಕಿ ಹುರಿಯಿರಿ. ಈಗ ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಪೆಪ್ಪರ್ ಪುಡಿ, ಜೀರಿಗೆ ಪುಡಿ, ಉಪ್ಪು, ಬಿರಿಯಾನಿ ಮಸಾಲೆ, ಇವೆಲ್ಲವನ್ನೂ ಸೇರಿಸಿ. ಒಂದು ವಿಶಲ್ ಬರುವ ಹಾಗೆ ಬೇಯಿಸಿ. ಬಳಿಕ ಇದಕ್ಕೆ ಕೇಸರಿ ದಳ, ಅನ್ನ, ಹುರಿದಿಟ್ಟ ಪನೀರ್, ಈರುಳ್ಳಿ, ಡ್ರೈಫ್ರೂಟ್ಸ್ ಸೇರಿಸಿದರೆ, ಶಾಹಿ ಪನೀರ್ ಬಿರಿಯಾನಿ ರೆಡಿ.

Deepavali Special:ಅವಲಕ್ಕಿ ಚಿವಡಾ ರೆಸಿಪಿ

ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

ಸುಟ್ಟ ಗಾಯಗಳು ಮಾಸಿ ಹೋಗುತ್ತಾ..?

About The Author