Friday, October 17, 2025

Latest Posts

ಆಗಾಗ ಹೊಟ್ಟೆನೋವು ಬರುತ್ತಿದೆಯಾ..? ಇದು ಅಪೆಂಡಿಕ್ಸ್ ಸೂಚನೆ ಇರಬಹುದು..

- Advertisement -

Health Tips: ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬಗ್ಗೆ ವೈದ್ಯರು ನಿಮಗೆ ಹಲವಾರು ಮಾಹಿತಿ ನೀಡಿದ್ದಾರೆ. ಪೈಲ್ಸ್ ಹೇಗೆ ಬರುತ್ತದೆ. ಅದಕ್ಕೆ ಹೇಗೆ ಚಿಕಿತ್ಸೆ ಪಡೆಯಬೇಕು. ಹರ್ನಿಯಾ ಅಂದರೇನು..? ಅದರ ಲಕ್ಷಣಗಳೇನು ಅಂತಾ ವೈದ್ಯರು ವಿವರಿಸಿದ್ದಾರೆ. ಇಂದು ಆಗಾಗ ಹೊಟ್ಟೆ ನೋವಾಗುತ್ತಿದ್ದರೆ, ಇದು ಯಾವುದರ ಲಕ್ಷಣ..? ಅಪೆಂಡಿಕ್ಸ್ ಸೂಚನೆ ಹೇಗಿರತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಅಪೆಂಡಿಕ್ಸ್ ಅಂದ್ರೆ ಕರುಳಿನ ಒಂದು ಭಾಗ. ಇದು ಸಣ್ಣ ಕರುಳಿಗಿಂತ ಚಿಕ್ಕದಾಗಿರುತ್ತದೆ. ಸಣ್ಣ ಹುಳದಂತೆ ಇರುತ್ತದೆ. ಅಲ್ಲಿ ಇನ್‌ಫೆಕ್ಷನ್ ಆದಾಗಲೇ, ರೋಗ ಶುರುವಾಗುತ್ತದೆ. ಆಗಲೇ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ಚಿಕ್ಕ ಮಕ್ಕಳು ಪದೇ ಪದೇ ಹೊಟ್ಟೆ ನೋವು ಅಂದ್ರೆ, ವೈದ್ಯರ ಬಳಿ ಒಮ್ಮೆ ಪರೀಕ್ಷಿಸಿ, ಅದು ಅಪೆಂಡಿಕ್ಸ್ ಹೌದೋ, ಅಲ್ಲವೋ, ಅಂತಾ ಕನ್‌ಫರ್ಮ್ ಮಾಡಿಕೊಳ್ಳಬೇಕು ಅಂತಾ ಹೇಳುವುದು.

ಅಪೆಂಡಿಕ್ಸ್ ಆದಾಗ, ಬರೀ ಹೊಟ್ಟೆನೋವು ಅಷ್ಟೇ ಅಲ್ಲದೇ, ವಾಂತಿ, ಜ್ವರ ಕೂಡ ಬರುತ್ತದೆ. ಇಂಥ ಲಕ್ಷಣಗಳು ಕಂಡುಬಂದಲ್ಲಿ, ಅದು ಅಪೆಂಡಿಕ್ಸ್ ಅಂತಾ ಗೊತ್ತಾಗಿದ್ದಲ್ಲಿ, ನೀವು ಆದಷ್ಚು ಬೇಗ ಚಿಕಿತ್ಸೆ ತೆಗೆದುಕೊಳ್ಳಬೇಕು. ಆಪರೇಷನ್ ಮಾಡಿಸಲೇಬೇಕು. ಇಲ್ಲದಿದ್ದಲ್ಲಿ, ಇದು ನಿಮ್ಮ ಜೀವಕ್ಕೆ ಹಾನಿ ಮಾಡಬಹುದು.

ಆದರೆ ಎಲ್ಲ ಹೊಟ್ಟೆ ನೋವು ಅಪೆಂಡಿಕ್ಸ್ ಆಗಿರುವುದಿಲ್ಲ. ಕೆಲವೊಮ್ಮೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಹೆಚ್ಚು ಉಷ್ಣವಿರುವ ಪದಾರ್ಥ ತಿಂದಾಗ ಹೊಟ್ಟೆ ನೋವಬಹುದು. ಹೆಚ್ಚು ಖಾರ ತಿಂದಾಗ ಹೊಟ್ಟೆ ನೋವು ಬರುತ್ತದೆ. ಹಾಗಾಗಿ ನಿಮಗೆ ಪದೇ ಪದೇ ಹೊಟ್ಟೆನೋವಾಗಿ, ಜ್ವರ ಬಂದು, ವಾಂತಿಯೂ ಆಗುತ್ತಿದ್ದರೆ, ಅದು ಅಪೆಂಡಿಕ್ಸ್ ಲಕ್ಷಣ ಎಂದು ತಿಳಿಯಬೇಕು. ಈ ಬಗ್ಗೆ ವೈದ್ಯರು ಇನ್ನು ಏನೇನು ವಿವರಿಸಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss