Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಗೀರ್ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೇರೆ ಹಸುಗಳಿಗಿಂತ ಡಿಫ್ರೆಂಟ್ ಆಗಿ ಕಾಣುವ ಗೀರ್ ಹಸು, ನೋಡಲು ಕುಬ್ಜ ಮತ್ತು ಚೆಂದ. ಅಷ್ಟೇ ಅಲ್ಲದೇ, ಇದು ಕೊಡುವ ಹಾಲು ಕೂಡ ಉತ್ತಮ ಕ್ವಾಲಿಟಿಯದ್ದಾಗಿರುತ್ತದೆ. ಹಾಗಾಗಿ ಈ ಹಸುವಿನ ಹಾಲಿನ ತುಪ್ಪಕ್ಕೆ ಸಿಕ್ಕಾಪಟ್ಟೆ ರೇಟಿದೆ. ಗಿರ್ ಹಸುವಿನ ತುಪ್ಪದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗೀರ್ ಹಸುವಿನ ಬೆಲೆಯೇ 1 ಲಕ್ಷದಿಂದ ಶುರುವಾಗಿ 5ರಿಂದ 10 ಲಕ್ಷದವರೆಗೂ ಇದೆ. ಇನ್ನು ಒಮ್ಮೆ ಗೀರ್ ಹಸು 3ರಿಂದ 3ವರೆ ಲೀಟರ್ನಷ್ಟು ಹಾಲು ನೀಡುತ್ತದೆ. ಇನ್ನು ಸಾಮಾನ್ಯ ಹಸುಗಳಿಗೂ, ಗೀರ್ ತಳಿಗೂ ಇರುವ ವ್ಯತ್ಯಾಸವೇನು ಎಂದರೆ, ಬೇರೆ ಹಸುಗಳಿಗಿಂತ ಗೀರ್ ತಳಿ ಶಾಂತ ಸ್ವಭಾವದ್ದಾಗಿದೆ.
ಇನ್ನು ಗೀರ್ ಹಸುವಿನ ತುಪ್ಪ 1ಕೆಜಿಗೆ 3 ಸಾವಿರ ರೂಪಾಯಿ ಬೆಲೆ ಇದೆ. ಇದರ ಬೆಲೆ ಕೇಳಿದವರು ಮೊದಲು ತುಪ್ಪಾ ತುಂಬಾ ಕಾಸ್ಟ್ಲಿ ಎಂದವರು, ಒಮ್ಮೆ ಖರೀದಿಸಿದ ಬಳಿಕ, ಪದೇ ಪದೇ ಬಂದು ತುಪ್ಪ ಖರೀದಿಸುತ್ತಾರಂತೆ. ಏಕೆಂದರೆ, ಗೀರ್ ಹಸುವಿನ ತುಪ್ಪ ಅಷ್ಟು ರುಚಿಕರ ಮತ್ತು ಆರೋಗ್ಯವಾಗಿರುತ್ತದೆ. ಈ ಹಸುವಿನ ಬಗ್ಗೆ ಮತ್ತು ಹಸುವಿನ ತುಪ್ಪದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..




