Health Tips: ಸೋರಿಯಾಸಿಸ್ ಖಾಯಿಲೆ ಅಂದ್ರೆ, ಭಾರೀ ಅಪರೂಪದ ಖಾಯಿಲೆಯಾಗಿತ್ತು. ಎಲ್ಲೋ ಒಬ್ಬರಿಗೋ, ಇಬ್ಬರಿಗೋ ಬರುವಂಥ ಖಾಯಿಲೆಯಾಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸೋರಿಯಾಸಿಸ್ ಖಾಯಿಲೆ ಬರುತ್ತಿದೆ. ಹಾಗಾದ್ರೆ ಈ ಸೋರಿಯಾಸಿಸ್ ಖಾಯಿಲೆ ಬರಲು ಕಾರಣವೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
ವೇದಂ ಆಸ್ಪತ್ರೆ ವೈದ್ಯರು, ಖ್ಯಾತ ಆಯುರ್ವೇದ ತಜ್ಞರು ಆದ ಡಾ.ರವಿರಾಜ್ ಅವರು ಸೋರಿಯಾಸಿಸ್ ರೋಗದ ಬಗ್ಗೆ ವಿವರಣೆ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮೊದಲೆಲ್ಲ ವಿದೇಶಿಗರಿಗೆ ಹೆಚ್ಚಾಗಿ ಸೋರಿಯಾಸಿಸ್ ಖಾಯಿಲೆ ಬರುತ್ತಿತ್ತು. ಆದರೆ ಇದೀಗ ಭಾರತೀಯರಲ್ಲೂ ಈ ಖಾಯಿಲೆ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿಯೇ ಮುಖ್ಯ ಕಾರಣ ಅಂತಾರೆ ವೈದ್ಯರು.
ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು. ಅತೀ ಹುಳಿಯಾದ ಆಹಾರ, ಜಂಕ್ ಫುಡ್ ಸೇವನೆ ಮಾಡುವುದು. ರಾತ್ರಿ ಎಚ್ಚರಿದ್ದು, ಹಗಲು ನಿದ್ರಿಸುವುದು. ಅತೀಯಾದ ಧೂಮಪಾನ ಮತ್ತು ಮದ್ಯಪಾನ ಸೇವನೆ ಮಾಡುವುದರಿಂದ, ಸೋರಿಯಾಸಿಸ್ ಖಾಯಿಲೆ ಬರುತ್ತದೆ. ನಾವು ಈ ರೀತಿ ಅನಾರೋಗ್ಯಕಾರಿಯಾಗಿ ಜೀವನ ಮಾಡುತ್ತಿದ್ದರೆ, ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆಗ ಇಂಥ ಖಾಯಿಲೆ ಬರುತ್ತದೆ.
ಹಾಗಾಗಿ ಹೊತ್ತಿಗೆ ಸರಿಯಾಗಿ ಆರೋಗ್ಯಕರ ಊಟದ ಸೇವನೆ, ಸರಿಯಾದ ಸಮಯಕ್ಕೆ ನಿದ್ದೆ ಮಾಡಿ, ಧೂಮಪಾನ, ಮದ್ಯಪಾನ ಸೇವನೆ, ಅತೀಯಾದ ಹುಳಿ ಪದಾರ್ಥ ಸೇವನೆ ಮಾಡದೇ, ಉತ್ತಮ ಜೀವನ ಶೈಲಿ ನಿರ್ವಹಿಸಿದರೆ, ಸೋರಿಯಾಸಿಸ್‌ನಂಥ ಖಾಯಿಲೆ ಬರುವುದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

