Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ, ಹಲ್ಲು ಉದುರುವ ರೀತಿ, ಕಣ್ಣಿಗೆ ಪೊರೆ ಬರುತ್ತದೆ. ಅದರಲ್ಲೂ ಯಾರಿಗೆ ಡಯಾಬಿಟೀಸ್ ಇರುತ್ತದೆಯೋ, ಅವರಿಗೆ ಬೇಗ ಕಣ್ಣಿಗೆ ಪೊರೆ ಬರುತ್ತದೆ. ಇದು ವಯೋಸಹಜವಾಗಿ ಆಗುವಂಥ ಪ್ರಕ್ರಿಯೆ. ಹಲವರು ಇದಕ್ಕಾಗಿ ಆಪರೇಷನ್ ಮಾಡಿಸಿಕೊಳ್ಳುತ್ತಾರೆ. ಅಂಥವರಿಗೆ ಕೆಲ ವರ್ಷ ಹೆಚ್ಚಾಗಿ, ಕಣ್ಣು ಕಾಣುತ್ತದೆ. ಅವರ ಕಣ್ಣು ಬೇಗ ಮಂಜಾಗುವುದಿಲ್ಲ.
ಯಾರಿಗಾದರೂ ಕಣ್ಣು ಮಂಜು ಮಂಜಾಗುತ್ತಿದೆ. ಸರಿಯಾಗಿ ಕಣ್ಣು ಕಾಣುತ್ತಿಲ್ಲ., ಡ್ರೈವ್ ಮಾಡುವಾಗ, ಸರಿಯಾಗಿ ಕಾಣಿಸುವುದಿಲ್ಲ ಎಂತಾದರೆ, ಅಂಥವರು ಒಂದು ಕಣ್ಣು ಮುಚ್ಚಿ, ಇನ್ನೊಂದು ಕಣ್ಣು ತೆರೆದು, ಯಾವ ಕಣ್ಣಿನಲ್ಲಿ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬಹುದು. ಕಣ್ಣಿಗೆ ಪೊರೆ ಬಂದಾಗ, ಕ್ರಮೇಣ ದೃಷ್ಟಿ ಕಡಿಮೆಯಾಗುತ್ತಾ ಹೋಗುತ್ತದೆ. ಅಂಥವರು, ಆದಷ್ಟು ಬೇಗ ವೈದ್ಯರ ಬಳಿ, ಚಿಕಿತ್ಸೆ ಪಡೆದು ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ..