Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಬ್ಲೀಡಿಂಗ್ ಆಗುವ ರೀತಿ, ಬಿಳಿಪದರ ಸ್ರಾವವೂ ಆಗುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ಹಾಗೆ ಹೋಗುವ ಬಿಳಿ ಪದರ ಸ್ರಾವ ಆರೋಗ್ಯಕರವಾಗಿದ್ದರೆ ಓಕೆ. ಅನಾರೋಗ್ಯಕರವಾಗಿದ್ದಲ್ಲಿ, ನೀವು ವೈದ್ಯರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಲೇಬೇಕು. ಹಾಗಾದ್ರೆ ಸಹಜ ಮತ್ತು ಅಸಹಜ ಬಿಳಿಪದರ ಸ್ರಾವ ಎಂದರೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ವಿದ್ಯಾಭಟ್ ಈ ಬಗ್ಗೆ ವಿವರಣೆ ನೀಡಿದ್ದು, ಮುಟ್ಟಾಗಿ ಕೆಲ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುತ್ತದೆ. ಅದು ಸಹಜ ಬಿಳಿಪದರ ಸ್ರಾವ. ಆದರೆ ಹೀಗೆ ಆಗುವ ಸ್ರಾವ ಬಿಳಿಯಾಗಿರದೇ, ತಿಳಿ ಗುಲಾಬಿ ಅಥವಾ ತಿಳಿ ಹಳದಿ ಬಣ್ಣವಾಗಿದ್ದು, ಕೊಂಚ ಹೋಗಬೇಕಿದ್ದ ಬಿಳಿಪದರ, ಹೆಚ್ಚು ಹೋಗುತ್ತಿದ್ದು, ತುಂಬ ವಾಸನೆ ಬರುವುದೆಲ್ಲ ಆದರೆ, ಇದು ಅಸಹಜ ಬಿಳಿಪದರ ಸ್ರಾವ ಎಂದರ್ಥ.
ಬಿಳಿ ಬಿಟ್ಟು ಬೇರೆ ಬಣ್ಣದಲ್ಲಿದ್ದರೆ, ಮೂತ್ರನಾಳದ ಬೇರೆ ಬೇರೆ ರೀತಿಯ ಸೋಂಕಿನ ಸಮಸ್ಯೆಯಾಗಿರುತ್ತದೆ ಅನ್ನೋದನ್ನ ನೀವು ತಿಳಿದಿರಬೇಕು. ಇಂಥ ಸನ್ನಿವೇಷದಲ್ಲಿ ನೀವೇ, ಮನೆ ಮದ್ದು ಮಾಡಿಕೊಂಡು, ಕಡಿಮೆಯಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸದೇ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲವಾದಲ್ಲಿ, ಈ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.