Health Tips: ಕಣ್ಣು ಅಂದ್ರೆ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಹೀಗೆ ಯಾಕೆ ಹೇಳೋದು ಅಂದ್ರೆ, ನೀವು 10 ನಿಮಿಷ ಕಣ್ಣು ಮುಚ್ಚಿಕೊಂಡು, ನಿಮ್ಮೆಲ್ಲ ಕೆಲಸ ಮಾಡಲು ಪ್ರಯತ್ನಿಸಿ. ಖಂಡಿತ ಕಷ್ಟವಾಗುತ್ತದೆ. ಅಂಥಹುದರಲ್ಲಿ ಕಣ್ಣು ಕಳೆದುಕೊಂಡವರು, ಕಣ್ಣು ಕಾಣದವರ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಊಹಿಸಿ. ಹಾಗಾಗಿ ದೇವರು ಕೊಟ್ಟ ಕಣ್ಣನ್ನು ಜೋಪಾನವಾಗಿ ಇರಿಸಿಕೊಳ್ಳಬೇಕು. ಅದರಲ್ಲೂ ಕಣ್ಣಿನ ಬಣ್ಣದ ಬಗ್ಗೆಯೂ ನಾವು ಗಮನಹರಿಸಬೇಕು. ಆ ಬಗ್ಗೆ ತಿಳಿಯೋಣ ಬನ್ನಿ..
ನಮಗೆ ಇನ್‌ಫೆಕ್ಷನ್ ಆದಾಗ, ಕಣ್ಣು ಕೆಂಪಗಾಗುತ್ತದೆ. ಇತ್ತೀಚೆಗೆ ಹೆಚ್ಚು ಕಾಣಿಸಿಕೊಂಡಿರುವ ಮಡ್ರಾಸ್ ಐ ಅಥವಾ ಬೇರೆ ಇನ್‌ಫೆಕ್ಷನ್‌ಗಳಿಂದಲೂ ಕಣ್ಣು ಕೆಂಪಾಗಬಹುದು. ಅಲ್ಲದೇ, ಕಣ್ಣಿಗೆ ಧೂಳು ಹೋದರೂ ಕಣ್ಣು ಕೆಂಪಗಾಗುತ್ತದೆ. ಹಾಗಾಗಿ ನಾವು ನಮ್ಮ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಆಗ ನಮ್ಮ ಕಣ್ಣು ಆರೋಗ್ಯವಾಗಿರುತ್ತದೆ. ಕಣ್ಣಿನ ಆರೋಗ್ಯಕ್ಕೂ, ಕೈಗೂ ಏನು ಸಂಬಂಧವೆಂದರೆ, ನಾವು ನಮ್ಮ ಕೈಗಳನ್ನು ಕಣ್ಣಿಗೆ ತಾಕಿಸುತ್ತೇವೆ. ಆಗಲೇ ಕಣ್ಣಿಗೆ ಇನ್‌ಫೆಕ್ಷನ್ ಆಗುತ್ತದೆ. ಹಾಗಾಗಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಇನ್ನು ಕಾಮಾಲೆ ರೋಗ ಬಂದಾಗ, ಕಣ್ಣು ಹಳದಿಯಾಗಿರುತ್ತದೆ. ಹಾಗಾಗಿ ನಿಮ್ಮ ಕಣ್ಣು ಕೆಂಪು, ಗುಲಾಬಿ ಅಥವಾ ಹಳದಿ ಬಣ್ಣಕ್ಕೆ ತಿರುಗಿದಾಗ, ಅದಕ್ಕೆ ಕಾರಣವೇನು ಎಂದು ವೈದ್ಯರ ಬಳಿ ಪರೀಕ್ಷಿಸಿಕೊಂಡು, ಅದಕ್ಕೆ ಬೇಕಾದ ಡ್ರಾಪ್ಸ್ ಬಳಸುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..