2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಸೆಲೆಬ್ರಿಟಿಗಳಿವರು..

2023 special stories: 2023ರಲ್ಲಿ ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಹಾಗಾಗಿ 2023ನೇ ವರ್ಷ ಅವರಿಗೆ ಹರ್ಷದ ವರ್ಷ ಅಂತಾನೇ ಹೇಳಬಹುದು. ವಸಿಷ್ಠ ಸಿಂಹ- ಹರಿಪ್ರಿಯಾ, ಅಭಿ-ಅವಿವಾ, ಹರ್ಷಿಕಾ-ಭುವನ್ ಸೇರಿ ಹಲವು ನಟ ನಟಿಯರು, ನಿರ್ದೇಶಕರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಸಿಷ್ಠ ಸಿಂಹ- ಹರಿಪ್ರಿಯಾ: ಸ್ಯಾಂಡಲ್‌ವುಡ್ ಸ್ಟಾರ್ ಜೋಡಿಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ 2023ರಲ್ಲೇ ಪ್ರೀತಿಸಿ ಮದುವೆಯಾಗಿದ್ದಾರೆ. ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಅಭಿಷೇಕ್ ಅಂಬರೀಷ್- ಅವಿವಾ: ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಕೂಡ 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಜೊತೆ ಅಭಿ ಇದೇ ವರ್ಷ ಜೂನ್ 5ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಸಪ್ತಪದಿ ತುಳಿದರು.

ಹರ್ಷಿಕಾ ಪೂಣಚ್ಛ- ಭುವನ್ ಪೊನ್ನಣ್ಣ: ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದ ಈ ಜೋಡಿ, ಇದೇ ವರ್ಷ ಆಗಸ್ಟ್‌ನಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಪೂಜಾಗಾಂಧಿ- ವಿಜಯ್: ಪೂಜಾಗಾಂಧಿ ಹೊರರಾಜ್ಯದವರಾದರೂ, ಅವರು ಇಲ್ಲಿ ಬಂದು, ಕನ್ನಡ ಕಲಿತು, ಕನ್ನಡತಿಯಾಗೇ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ. ಅಷ್ಟೇ ಅಲ್ಲದೇ, ಇದೇ ವರ್ಷ ಪೂಜಾಗಾಂಧಿ ವಿಜಯ್ ಎಂಬುವವರ ಜೊತೆ, ಕುವೆಂಪು ಅವರು ಹೇಳಿದಂತೆ ಮಂತ್ರ ಮಾಂಗಲ್ಯ ಎಂಬ ಮದುವೆ ಪದ್ಧತಿಯಡಿಯಲ್ಲಿ, ಸಿಂಪಲ್ ಆಗಿ ವಿವಾಹವಾಗಿದ್ದಾರೆ.

ರಿಷಿಕಾ ಶರ್ಮಾ- ನಿಹಾಲ್: ಸ್ಯಾಂಡಲ್‌ವುಡ್‌ನ ನಿರ್ದೇಶಕಿ ರಿಷಿಕಾ ಶರ್ಮಾ ಕೂಡ ನಿಹಾಲ್ ಎಂಬುವವರೊಂದಿಗೆ ಈ ವರ್ಷ ಸಪ್ತಪದಿ ತುಳಿದಿದ್ದಾರೆ.

ಶುಭ್ರಾ ಅಯ್ಯಪ್ಪ- ವಿಶಾಲ್: ನಟಿ ಶುಭ್ರಾ ಅಯ್ಯಪ್ಪ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿ, ಕನ್ನಡಿಗರಿಗೆ ಅಚ್ಚುಮೆಚ್ಚಾಗಿದ್ದರು. ಈ ಕೊಡಗಿನ ಬೆಡಗಿ ವಿಶಾಲ್ ಎಂಬುವವರೊಂದಿಗೆ ಇದೇ ವರ್ಷ ವಿವಾಹವಾಗಿದ್ದಾರೆ.

ವಾಸುಕಿ ವೈಭವ್- ಬೃಂದಾ: ಸಂಗೀತಗಾರ ವಾಸುಕಿ ವೈಭವ್ ನಟಿ ಚಂದನಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರನ್ನೇ ಮದುವೆಯಾಗುತ್ತಾರೆ ಅನ್ನೋ ಗಾಸಿಪ್ ಎಲ್ಲೆಡೆ ಓಡಾಡುತ್ತಿತ್ತು. ಅದರಂತೆ ವಾಸುಕಿ ಕೂೠ ಚಂದನಾ ಜೊತೆ ಫೋಟೋಶೂಟ್ ಮಾಡಿಸಿದ್ರು. ಆದರೆ ಕೊನೆಗೆ ಅವರು ಪ್ರೀತಿಸಿದ ಹುಡುಗಿ ಬೃಂದಾ ರೊಂದಿಗೆ ವಿವಾಹವಾಗಿ ಎಲ್ಲರಿಗೂ ಸರ್ಪೈಸ್ ಕೊಟ್ಟಿದ್ದಾರೆ. ಈ ಜೋಡಿ ಕೂಡ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಪ್ರಿಯಾಂಕಾ ಕಾಮತ್- ಅಮಿತ್: ಗಿಚ್ಚಿ ಗಿಲಿ ಗಿಲಿ ನಟಿ ಪ್ರಿಯಾಂಕಾ ಕಾಮತ್ ಮತ್ತು ಅಮಿತ್ ಕೂಡ ಇದೇ ವರ್ಷ ಮದುವೆಯಾಗಿದ್ದಾರೆ. ಜನವರಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್ ಆಗಿತ್ತು. ಆದರೆ ಪ್ರಿಯಾಂಕಾಗೆ ಅನಾರೋಗ್ಯವಿದ್ದ ಕಾರಣ, ಅವರಿಗೆ 2 ಬಾರಿ ಸರ್ಜರಿಯಾಗಿತ್ತು. ಆಗ ಅವರು ಅಮಿತ್‌ಗೆ ನೀನು ಬೇರೆ ಹುಡುಗಿಯನ್ನು ವಿವಾಹವಾಗು ಎಂದಿದ್ದರು. ಆದರೂ ಕೂಡ ಅಮಿತ್ ಪ್ರಿಯಾಂಕಾರ ಕೈ ಬಿಡದೇ, ಆಕೆಯ ಜೊತೆಗಿದ್ದು, ಆಕೆಯ ಆರೈಕೆ ಮಾಡಿದ್ದರು. ಬಳಿಕ ಅಮಿತ್ ಕುಟುಂಬ ಮತ್ತು ಪ್ರಿಯಾಂಕಾ ಮಲೇಶಿಯಾ ಪ್ರವಾಸಕ್ಕೆ ಹೋಗಿತ್ತು. ಜೊತೆಗೆ ಈ ಜೋಡಿ ಬೇರೆ ದೇಶಗಳಿಗೂ ಟ್ರಿಪ್ ಹೋಗಿದ್ದು, ಇಂದು ಇವರು ಹಸೆಮಣೆ ಏರಿದ್ದಾರೆ.

ತಪಸ್ವಿನಿ ಪೂಣಚ್ಛ- ರಕ್ಷತ್ ಮುತ್ತಣ್ಣ: ಹರಿಕಥೆ ಅಲ್ಲಾ ಗಿರಿಕಥೆ ಮೂಲಕ ಪರಿಚಿತರಾಗಿದ್ದ ಕ್ಯೂಟ್ ಕೊಡಗಿನ ಬೆಡಗಿ, ತಪಸ್ವಿನಿ ಪೂಣಚ್ಛ ಕೂಡ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಕ್ಷತ್ ಮುತ್ತಣ್ಣರೊಟ್ಟಿಗೆ ಕೊಡಗು ಪದ್ಧತಿಯಲ್ಲಿ ಹಸೆಮಣೆ ತುಳಿದಿದ್ದಾರೆ.

ಸಿದ್ಧು ಮೂಲಿಮನಿ- ಪ್ರಿಯಾ ಆಚಾರ್: ಇನ್ನು ಕಿರುತೆರೆ ನಟ-ನಟಿಯಾದ ಸಿದ್ದು ಮತ್ತು ಪ್ರಿಯಾ ಆಚಾರ, ಪ್ರೀತಿಸಿ ಇದೇ ವರ್ಷ ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ಗಟ್ಟಿಮೇಳ ಮತ್ತು ಪಾರು ಸಿರಿಯಲ್ ತಂಡದ ಸದಸ್ಯರು ಸೇರಿ ಹಲವು ಕಿರುತೆರೆ ನಟ- ನಟಿಯರು ಹಾಜರಾಗಿದ್ದರು.

ಪ್ರಥಮ್- ಭಾನುಶ್ರೀ: ಒಳ್ಳೆ ಹುಡುಗ ಪ್ರಥಮ್ ಕೂಡ ಇದೇ ವರ್ಷ ಮಂಡ್ಯದ ಹುಡುಗಿ ಭಾನುಶ್ರೀ ಜೊತೆ, ನವೆಂಬರ್‌ನಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದಾರೆ.

ನಟ ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ಲಹರಿ ವೇಲು

ಕೇಕ್ ಕತ್ತರಿಸುವಾಗ ಹಿಂದೂ ದೇವರಿಗೆ ಜೈ ಎಂದ ರಣ್ಬೀರ್: ದಾಖಲಾಯ್ತು ಎಫ್‌ಐಆರ್

ಡೈರೆಕ್ಟರ್ ವರ್ಮಾ ತಲೆ ತಂದವರಿಗೆ 1 ಕೋಟಿ ರೂ. ಬಹುಮಾನ ಘೋಷಣೆ: ಎಫ್‌ಐಆರ್ ದಾಖಲು

About The Author