Health Tips: ವಾಕಿಂಗ್ ಮಾಡುವುದು ಉತ್ತಮ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ, ವಾಕಿಂಗ್ ಮಾಡುವಾಗ, ಯಾವ ರೂಲ್ಸ್ ಫಾಲೋ ಮಾಡಬೇಕು. ನಾವು ಧರಿಸುವ ಚಪ್ಪಲಿ ಅಥವಾ ಶೂಸ್ ಹೇಗಿರಬೇಕು ಅಂತಲೂ ನಮಗೆ ಗೊತ್ತಿರಬೇಕು. ಇಂದು ವೈದ್ಯರು ಈ ಬಗ್ಗೆ ವಿವರಿಸಿದ್ದಾರೆ ನೋಡಿ..
ನಾವು ವಾಕಿಂಗ್ ಮಾಡುವುದು ಎಷ್ಟು ಮುಖ್ಯವೋ, ಅದರೊಂದಿಗೆ ನಾವು ಯಾವ ರೀತಿಯ ಬಟ್ಟೆ, ಶೂಸ್, ಚಪ್ಪಲಿ ಧರಿಸುತ್ತೇವೆ ಎನ್ನುವುದು ಕೂಡ ಅಷ್ಟೇ ಮುಖ್ಯ ಎನ್ನುತ್ತಾರೆ ಡಯಟೀಶಿಯನ್ ರಕ್ಷಿತಾ ನಾಯ್ಕ್. ನೀವು ಯಾಕೆ ಈ ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವೆಂದರೆ, ನೀವುಹೆಚ್ಚು ವಾಕ್ ಮಾಡಿದಾಗ, ನೀವು ಬೆವರುತ್ತೀರಿ. ಹಾಗೆ ಬೆವರಿದಾಗ, ನಿಮ್ಮ ಬಟ್ಟೆ ನಿಮ್ಮ ದೇಹಕ್ಕೆ ಅಂಟಿಕೊಳ್ಳುತ್ತದೆ. ಆಗ ನಿಮಗೆ ಅಷ್ಟು ಕಂಫರ್ಟೇಬಲ್ ಆಗಿರುವುದಿಲ್ಲ. ಹಾಗಾಗಿ ನೀವು ನಿಮ್ಮ ದೇಹಕ್ಕೆ ಕಂಫರ್ಟ್ ಆಗಿರುವ ಬಟ್ಟೆಯನ್ನೇ ಧರಿಸಬೇಕು.
ಇನ್ನು ವಾಕಿಂಗ್ ಮಾಡುವಾಗ, ನಾವು ಯಾವ ರೀತಿಯ ಶೂಸ್, ಚಪ್ಪಲಿ ಧರಿಸುತ್ತೇವೆ ಅನ್ನೋದು ಮುಖ್ಯ. ಏಕೆಂದರೆ, ನಾವು ಹೀಲ್ಸ್ ಹಾಕಿಕೊಂಡು ವಾಕಿಂಗ್ ಮಾಡಲಾಗುವುದಿಲ್ಲ. ಅದರಿಂದ ನಿಮ್ಮ ತೊಡೆ ಮತ್ತು ಮಂಡಿಯ ಮೇಲೆ ಅನಾರೋಗ್ಯಕರ ಪ್ರಭಾವ ಬೀರುತ್ತದೆ. ಹಾಗಾಗಿ ನಿಮಗೆ ಸರಿ ಎನ್ನಿಸುವ, ನಡೆಯಲು ಕಂಫರ್ಟ್ ಆಗಿರುವ ಶೂಸ್, ಚಪ್ಪಲಿಯನ್ನೇ ಧರಿಸಬೇಕು.
ಇನ್ನು ಶುಗರ್ ಇದ್ದವರಿಗೇ ಅಂತಾನೇ ಮಾರುಕಟ್ಟೆಯಲ್ಲಿ ಶೂಸ್ ಸಿಗುತ್ತದೆ. ಅಂಥವರು ಅದೇ ಚಪ್ಪಲಿಯನ್ನ ಬಳಸಬೇಕು. ಇದು ಅವರ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಈ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..