ಜೀವನ ದುಃಖಭರಿತವಾಗುವುದೇ ಈ ಕಾರಣಕ್ಕೆ..

Spiritual Story: ನಮ್ಮಲ್ಲಿ ಕೆಲವರು ಯಾವಾಗಲೂ ಕೋಪದಲ್ಲೇ, ದುಃಖದಲ್ಲೇ ಇರುತ್ತಾರೆ. ಅವರಿಗೆ ತೃಪ್ತಿ ಅನ್ನುವುದೇ ಇರುವುದಿಲ್ಲ. ಅವರು ಯಾವುದಾದರೂ ವಸ್ತು, ವ್ಯಕ್ತಿ, ಕಾರ್ಯಕ್ರಮ ಇತ್ಯಾದಿ ನೋಡಿದಾಗ, ಅದರಲ್ಲಿ ಏನಾದರೂ ಕೊಂಕು ಕಂಡುಹಿಡಿದು ಮಾತನಾಡುತ್ತಾರೆ. ಸ್ವತಃ ತಮ್ಮವರನ್ನೇ ಅವರು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಅತೃಪ್ತ ಭಾವನೆ ಅವರಲ್ಲಿರುತ್ತದೆ. ಹೀಗಾಗುವುದಕ್ಕೆ ಕಾರಣವೇನೆಂದರೆ, ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲ ಗುಣಗಳು. ಹಾಗಾದ್ರೆ ಜೀವನ ದುಃಖಭರಿತವಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ ಹಿಡಿತವಿಲ್ಲದ ಮಾತು. ಕೆಲವರು ಎದುರಿಗೆ ಇರುವವರ ಮನಸ್ಸಿಗೆ ನೋವಾಗುತ್ತದೆ. ಅವರಿಗೂ ದುಃಖವಾಗಬಹುದು ಎನ್ನುವ ಅರಿವಿಲ್ಲದೇ, ಬಾಯಿಗೆ ಬಂದ ರೀತಿ ಕೊಂಕು ಮಾತನಾಡುತ್ತಾರೆ. ಅವರ ಕಠೋರವಾದ ಮಾತುಗಳೇ, ಅವರನ್ನು ಅವರ ಮನೆಯವರ ಮನಸ್ಸಿನಿಂದ ದೂರಗೊಳಿಸುತ್ತದೆ. ಹಾಗಾಗಿ ಮಾತಿನ ಮೇಲೆ ಹಿಡಿತವಿರಬೇಕು. ಮಾತು ಕಹಿಯಾಗಿದ್ದರೆ, ಅಂಥವರನ್ನು ಜನ ಎಂದಿಗೂ ಇಷ್ಟಪಡುವುದಿಲ್ಲ.

ಎರಡನೇಯ ಕಾರಣ ಕೋಪ. ಕೋಪವಿರುವವರನ್‌ನು ಯಾರೂ ಇಷ್ಟಪಡುವುದಿಲ್ಲ. ಅಂಥವರೊಂದಿಗೆ ಮಾತನಾಡುವುದೇ ಕೊಚ್ಚೆಯ ಮೇಲೆ ಕಲ್ಲೆಸೆದ ಹಾಗೆ ಎಂದು ಎಲ್ಲರೂ ಭಾವಿಸುತ್ತಾರೆ. ಏಕೆಂದರೆ, ಏನು ಮಾತನಾಡಿದರೂ ಅವರು ಕೋಪ ತೋರಿಸುತ್ತಾರೆ. ಹಾಗಾಗಿ ಕೋಪ ಮಾಡುವವರು ಸದಾ ಒಂಟಿಯಾಗಿಯೇ ಇರಬೇಕಾಗುತ್ತದೆ.

ಮೂರನೇಯ ಕಾರಣ ಸ್ವಾರ್ಥ. ಯಾರು ಬರೀ ತಮ್ಮ ಬಗ್ಗೆಯಷ್ಟೇ ಯೋಚಿಸುತ್ತಾರೆ. ಬೇರೆಯವರಿಗೆ ಕೆಟ್ಟದ್ದಾದರೂ ತೊಂದರೆ ಇಲ್ಲ ಎನ್ನುತ್ತಾರೆ, ಅಂಥವರು ಸದಾ ದುಃಖಿಗಳಾಗಿ ಇರುತ್ತಾರೆ. ಅಂಥವರ ಸ್ವಾರ್ಥ ಭಾವನೆಯೇ, ಅವರ ದುಃಖಕ್ಕೆ ಕಾರಣವಾಗುತ್ತದೆ. ಅವರು ಸ್ವಾರ್ಥಗಳಾದ ಕಾರಣ, ಅವರ ಮನೆಯವರೇ ಅವರನ್ನು ಇಷ್ಟಪಡುವುದಿಲ್ಲ. ಆಗ ಅವರಿಗೆ ಯಾರ ಪ್ರೀತಿಯೂ ಸಿಗುವುದಿಲ್ಲ. ಪ್ರೀತಿ ಸಿಗದವರು ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ.

ನಾಲ್ಕನೇಯ ಕಾರಣ ಅತೀಯಾದ ಹೆಮ್ಮೆ. ಕೆಲವರು ತಾವು ಜೀವನದಲ್ಲಿ ಯಾವ ಸಾಧನೆ ಮಾಡದಿದ್ದರೂ, ಕುಳಿತು ತಿನ್ನುತ್ತಿದ್ದರೂ, ಪತಿ, ಮಗ, ಮಗಳು, ಅಥವಾ ಇನ್ಯಾವುದೋ ಸಂಬಂಧಿಕರು ಮಾಡಿದ ಸಾಧನೆಯನನು ತಾನೇ ಮಾಡಿದ ಹಾಗೆ ಹೆಮ್ಮೆ ಪಡುತ್ತಾನೆ. ತಮ್ಮ ಬಳಿ ಇರುವ ಸಣ್ಣ ಸಣ್ಣ ವಸ್ತುಗಳ ಬಗ್ಗೆಯೂ ಅವರಿಗೆ ಅತೀಯಾದ ಹೆಮ್ಮೆ ಇರುತ್ತದೆ. ಇದರಿಂದ ಜನ ಇಂಥವರ ಬಳಿ ಮಾತನಾಡುವುದನ್ನೇ ಕಡಿಮೆ ಮಾಡುತ್ತಾರೆ. ಹೀಗೆ ಇಂಥ ಜನರ ಜೀವನ ದುಃಖಭರಿತವಾಗಿರುತ್ತದೆ.

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..

ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..

About The Author