Saturday, March 15, 2025

Latest Posts

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಶ್ರೇಷ್ಠ ಯಾಕೆ..?

- Advertisement -

Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ ರೀತಿ ಇಂದು ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಶ್ರೇಷ್ಠ ಅಂತಾ ಹೇಳುವುದು ಯಾಕೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ವೈದ್ಯರು ಹೇಳುವುದೇನೆಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಬೇಕಾಗಿರುವುದೇ ಉತ್ತಮ, ಆರೋಗ್ಯಕರ ಆಹಾರ. ಇನ್ನು ಹೆಚ್ಚಿನ ಇಮ್ಯೂನಿಟಿ ಬೇಕಂದ್ರೆ ನಾವು ಸಸ್ಯಾಹಾರವನ್ನೇ ಸೇವಿಸಬೇಕು. ದೇಹಕ್ಕೆ ಎಷ್ಟು ಅಗತ್ಯವಿದೆಯೋ, ಅಷ್ಟೇ ಪ್ರೋಟೀನ್ ಪಡೆದುಕೊಳ್ಳಲು ಮಾಂಸಾಹಾರಿಗಳು, ಮಾಂಸಾಹಾರಗಳ ಸೇವನೆ ಮಾಡಬಹುದು. ಆದರೆ ಸಸ್ಯಾಹಾರ ಇನ್ನೂ ಉತ್ತಮ ಅಂತಾರೆ ವೈದ್ಯರು.

ಮಾಂಸಾಹಾರದಲ್ಲಿ ಉತ್ತಮ ಪೋಷಕಾಂಶಗಳು ಇರುತ್ತದೆ. ಆದರೆ ಅದರ ಜೊತೆಗೆ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಮಾಂಸಾಹಾರದ ಮಿತವಾದ ಸೇವನೆ ಆರೋಗ್ಯ ಕಾಪಾಡುತ್ತದೆ. ಹಾಗಾಗಿ ಮಾಂಸಾಹಾರದ ಸೇವನೆ ಅಗತ್ಯಕ್ಕಿಂತ ಹೆಚ್ಚು ಬೇಡ ಅಂತಾರೆ ವೈದ್ಯರು. ಹಾಗಂತ ಸಸ್ಯಾಹಾರಿಗಳಾದ್ರೆ ಆರೋಗ್ಯಕ್ಕೇನು ಕೊರತೆಯುಂಟಾಗುವುದಿಲ್ಲ. ಏಕೆಂದರೆ, ಸಸ್ಯಾಹಾರದಲ್ಲೂ ನಮ್ಮ ದೇಹಕ್ಕೆ ಪ್ರೋಟೀನ್, ವಿಟಾಮಿನ್‌ ಸೇರಿ ಆರೋಗ್ಯಕರ ಪೋಷಕಾಂಶಗಳನ್ನು ನೀಡುವ ಆಹಾರಗಳು ಸಾಕಷ್ಟಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss