ಮದ್ಯಪಾನದಿಂದ ಚಳಿ ತಡೆಗಟ್ಟಬಹುದು ಅನ್ನೋದು ತಪ್ಪು ಕಲ್ಪನೆ

Health Tips: ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಡಾ.ಆಂಜೀನಪ್ಪ ಅವರು ಸಾಕಷ್ಟು ಟಿಪ್ಸ್ ಕೊಟ್ಟಿದ್ದಾರೆ. ಚಳಿಗಾಲದಲ್ಲಿ ಆದಷ್ಟು ಬೆಚ್ಚಗೆ ಇರಬೇಕು. ಬಿಸಿ ಬಿಸಿ ನೀರು, ಕಾಫಿ, ಟೀ ಏನೇ ಕುಡಿಯುವುದಿದ್ದರೂ ಬಿಸಿ ಬಿಸಿಯಾಗಿರಬೇಕು. ಫ್ರಿಜ್‌ನಲ್ಲಿ ಇರಿಸಿದ ನೀರು, ಜ್ಯೂಸ್, ಆಹಾರವನ್ನು ಸೇವಿಸಬಾರದು. ಬಿಸಿ ಬಿಸಿ ಆಹಾರವನ್ನೇ ಸೇವಿಸಬೇಕು. ಆದಷ್ಟು ಫ್ರೆಶ್ ಹಣ್ಣು, ತರಕಾರಿ, ಸೊಪ್ಪು ಸೇವಿಸಬೇಕು ಎಂದು ಹೇಳಿದ್ದರು. ಇಂದು ಕೆಲವರು ಚಳಿಗಾಲದಲ್ಲಿ ಮದ್ಯಪಾನ, ಧೂಮಪಾನ ಮಾಡುತ್ತಾರೆ. ಅವರಿಗೆ ಹೀಗೆ ಮಾಡುವುದರಿಂದ, ದೇಹ ಬೆಚ್ಚಗಿರುತ್ತದೆ ಎಂಬ ಭ್ರಮೆ ಇದೆ. ಆ ಬಗ್ಗೆ ವೈದ್ಯರು ವಿವರಿಸಿದ್ದಾರೆ.

 

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಕೂಡ, ಕೆಲ ಕುಡುಕರು, ಧೂಮಪಾನಿಗಳು, ಚಳಿಗಾಲದಲ್ಲಿ ಎಂದಿಗಿಂತ ಹೆಚ್ಚು ಮದ್ಯಪಾನ ಮಾಡುತ್ತಾರೆ. ಧೂಮಪಾನ ಮಾಡುತ್ತಾರೆ. ಆದರೆ ಇದು ತಪ್ಪು ಅಂತಾರೆ ವೈದ್ಯರು.

ಚಳಿಗಾಲದಲ್ಲಿ ಅತೀ ಹೆಚ್ಚು ಮದ್ಯಪಾನ, ಧೂಮಪಾನ ಮಾಡುವುದರಿಂದ, ಮತಿಹೀನರಾಗುತ್ತಾರೆ. ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂದು ಅವರಿಗೇ ಗೊತ್ತಿರುವುದಿಲ್ಲ. ಅಷ್ಟು ಮತಿಹೀನರಾಗುತ್ತಾರೆ. ಇದು ಜೀವಕ್ಕೂ ಅಪಾಯ ತರಬಹುದು. ಹಾಗಾಗಿ ಚಳಿಗಾಲದಲ್ಲಿ ಮದ್ಯಪಾನ ಮಾಡುವುದರಿಂದ ದೇಹ ಬೆಚ್ಚಗಿರುತ್ತದೆ ಅನ್ನೋದು ತಪ್ಪು ಕಲ್ಪನೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

About The Author