Health Tips: ಪುಟ್ಟ ಮಕ್ಕಳನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಅದರಲ್ಲೂ ಪುಟ್ಟ ಶಿಶುಗಳಿಗೆ ನಾವು ಎಷ್ಟೇ ಆರೈಕೆ ಮಾಡಿದರೂ ಅದು ಕಡಿಮೆಯೇ. ಈ ಬಗ್ಗೆ ವೈದ್ಯರೇ ವಿವರಿಸಿದ್ದು, ಮಕ್ಕಳಿಗೆ ಪೌಡರ್ ಕೂಡ ಹಾಕಬಾರದು ಎಂದಿದ್ದಾರೆ.
ವೈದ್ಯರಾದ ಡೈ.ಸಹನಾ ದೇವದಾಸ್ ಈ ಬಗ್ಗೆ ವಿವರಿಸಿದ್ದು, ನೆಗಡಿ ಕೆಮ್ಮು ಇರುವಾಗ ನಾವು ಪುಟ್ಟ ಮಕ್ಕಳಿಂದ ಎಷ್ಟು ದೂರ ಇರುತ್ತೆವೋ ಅಷ್ಟು ಒಳ್ಳೆಯದು. ಏಕೆಂದರೆ ನೆಗಡಿ ಕೆಮ್ಮು ಪುಟ್ಟ ಮಕ್ಕಳಿಗೆ ಬೇಗ ಹರಡುತ್ತದೆ. ಹಾಗಾಗಿ ಅಂಥ ಸಮಯದಲ್ಲಿ ಮಾಸ್ಕ್ ಹಾಕಿ, ನಾವು ಮಕ್ಕಳೊಂದಿಗೆ ಇರುವುದು ಉತ್ತಮ.
ಇನ್ನು ಮಕ್ಕಳ ಬಳಿ ಹೋಗುವಾಗ ನಾವು ಸೆಂಟ್, ಪರ್ಫ್ಯೂಮ್ ಹಾಕಿಕೊಂಡು ಹೋಗಬಾರದು. ಮನೆಯಲ್ಲಿ ಕೆಲವು ಸುಹಾಸನೆಯುಕ್ತ ಬತ್ತಿಗಳನ್ನು ಹಚ್‌ಚಿದಾಗ, ಅದರಿಂದ ಮಗುವಿಗೆ ತೊಂದರೆಯಾಗುತ್ತಿದೆ ಎಂದಲ್ಲಿ, ಅದನ್ನು ಕೂಡ ಹೊರಗಿರಿಸಬೇಕು. ಅಷ್ಟೇ ಅಲ್ಲದೇ, ಮಕ್ಕಳಿಗೆ ಪೌಡರ್ ಕೂಡ ಹಾಕದಿದ್ದರೆ ಉತ್ತಮ. ಏಕೆಂದರೆ, ಅದರಲ್ಲೂ ಸುವಾಸನೆ ಬರಲು ಕೆಮಿಕಲ್ ಬಳಸಿರುತ್ತಾರೆ. ಅದರಿಂದಲೂ ಮಗುವಿನ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಗುವಿಗೆ ಪೌಡರ್ ಹಾಕಬಾರದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




