Spiritual News: ರಾಮಾಯಣದಲ್ಲಿ ಬರುವ ಸೀತಾಪಹರಣ ಕಥೆ ಕೇಳಿದಾಗ, ಹಲವರು ಹೇಳುವುದೇನೆಂದರೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದರ ಕಾರಣಕ್ಕೆ, ಪ್ರೀತಿಯ ತಂಗಿಗೆ ನೋವಾಗಿದ್ದಕ್ಕೆ, ರಾವಣ ಸೀತೆಯನ್ನು ಅಪಹರಿಸಿದ, ಬಳಿಕ ಆಕೆಯನ್ನು ಪ್ರೀತಿಸಿದ ಎನ್ನುತ್ತಾರೆ. ಆದರೆ ಇದು ಶೂರ್ಪನಖಿಯ ದ್ವೇಷವಾಗಿತ್ತು. ಹಾಗಾದ್ರೆ ಯಾಕೆ ಶೂರ್ಪನಖಿ ಅಣ್ಣ ರಾಾವಣನ ವಿರುದ್ಧವೇ ಷಡ್ಯಂತ್ರ ರಚಿಸಿದಳು ಅಂತಾ ತಿಳಿಯೋಣ ಬನ್ನಿ..
ಶೂರ್ಪನಖಿಗೆ ಮೊದಲೇ ಮದುವೆಯಾಗಿತ್ತು. ಆಕೆ ದಾನವ ರಾಜ ದುಷ್ಟಬುದ್ಧಿ ಎಂಬುವವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ದುಷ್ಟಬುದ್ಧಿ ರಾವಣನ ಮೇಲೆ ಯುದ್ಧ ಸಾರಬೇಕು ಎನ್ನುವಷ್ಟರಲ್ಲಿ, ರಾವಣನೇ ದುಷ್ಟಬುದ್ಧಿಯನ್ನು ಕೊಂದುಬಿಟ್ಟ. ತನ್ನ ಗಂಡನನ್ನು ಕೊಂದ ಕಾರಣ, ಶೂರ್ಪನಖಿ ತನ್ನ ಅಣ್ಣನ ಮೇಲೆ ದ್ವೇಷ ಸಾಧಿಸಲು ಪ್ರಾರಂಭಿಸಿದಳು.
ಲಕ್ಷ್ಮಣನ ಮೇಲೆ ಮನಸೋತು, ಅವನಿಂದ ಮೂಗು ಕತ್ತರಿಸಿಕೊಂಡು ಬಂದು ಅಣ್ಣನ ಬಳಿ ದೂರು ಹೇಳಿದಳು. ಅಣ್ಣ ರಾವಣನಿಗೆ ಸೀತೆಯ ಮೇಲೆ ಪ್ರೀತಿ ಹುಟ್ಟುವಂತೆ. ಮೋಹ ಹುಟ್ಟುವಂತೆ, ಏನೇನು ಹೇಳಬೇಕೋ ಎಲ್ಲವನ್ನೂ ಹೇಳಿದಳು. ಬಳಿಕವೇ ರಾವಣ, ಸೀತೆಯ ಬಳಿ ಸನ್ಯಾಸಿಯ ವೇಷದಲ್ಲಿ ಹೋಗಿ, ಆಕೆಯನ್ನು ಅಪಹರಣ ಮಾಡಿದ. ಇದಾದ ಬಳಿಕ ರಾಮ ರಾವಣರ ಯುದ್ಧ ನಡೆದು, ರಾವಣನ ಸಂಹಾರ ನಡೆದು ಹೋಯಿತು. ಈ ಮೂಲಕ ರಾವಣನ ಅಂತ್ಯವಾಯಿತು. ಶೂರ್ಪನಖಿಯ ದ್ವೇಷ ಪೂರ್ಣಗೊಂಡಿತು.
ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು