Saturday, July 5, 2025

Latest Posts

ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಾ..?

- Advertisement -

Health Tips: ಈಗಾಗಲೇ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿರುವ ಡಾ.ಚಂದ್ರಿಕಾ ಆನಂದ್, ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತಾ, ಇಲ್ಲವಾ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಮೊದಲನೇಯದಾಗಿ ಗರ್ಭಿಣಿಯರು ಸ್ವಚ್ಛವಾಗಿ ಇರಬೇಕು. ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆದರೆ ಪ್ರತಿದಿನ ತಲೆಸ್ನಾನ ಮಾಡಬೇಕೆಂದಿಲ್ಲ. ವಾರಕ್ಕೆರಡು ಬಾರಿ ತಲೆಸ್ನಾನ ಮಾಡಬೇಕು. ತಲೆಸ್ನಾನ ಮಾಡಿ, ತಲೆಯನ್ನು ಸರಿಯಾಗಿ ಒಣಗಿಸಿಕೊಳ್ಳಬೇಕು. ಇಲ್ಲವಾದಲ್ಲಿ, ತಲೆಯಲ್ಲಿ ಡ್ಯಾಂಡ್ರಫ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೆಗಡಿ, ಕೆಮ್ಮು ಬರಬಹುದು. ಹಾಗಾಗಿ ತಲೆಸ್ನಾನ ಮಾಡಿದಾಗ, ತಲೆಯನ್ನು ಸರಿಯಾಗಿ ಒರೆಸಿಕೊಳ್ಳಬೇಕು.

ಇನ್ನು ಗರ್ಭಿಣಿಯಾಗಿದ್ದಾಗ, ವೈದ್ಯರ ಸಲಹೆ ಇಲ್ಲದೇ, ಯಾವ ಮಾತ್ರೆಯನ್ನೂ ಸೇವಿಸಬಾರದು. ಇದರಿಂದ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ವೈದ್ಯರು ಯಾವ ಮಾತ್ರೆ ಸೂಚಿಸಿದ್ದಾರೋ, ಆ ಮಾತ್ರೆಯನ್ನೇ ನೀವು ಸೇವಿಸಬೇಕು. ಇನ್ನು ಗರ್ಬಾವಸ್ಥೆಯಲ್ಲಿ ಲೂಸ್ ಆಗಿರುವ ಕಾಟನ್ ಬಟ್ಟೆ ಧರಿಸಬೇಕು. ತುಂಬಾ ಟೈಟ್ ಆಗಿರು ಬಟ್ಟೆ ಧರಿಸಬಾರದು.

ಮೂತ್ರನಾಳವನ್ನು ಸದಾ ಡ್ರೈ ಇಟ್ಟುಕೊಳ್ಳಬೇಕು ಅಂತಾರೆ ವೈದ್ಯರು. ಕೆಲವರಿಗೆ ಗರ್ಭಾವಸ್ಥೆಯಲ್ಲಿ ಬಿಳಿ ಪದರ ಹೆಚ್ಚು ಹೋಗುತ್ತದೆ. ಆಗ ದಿನಕ್ಕೆ ಎರಡು ಒಳವಸ್ತ್ರ ಧರಿಸಿದರೂ ನಡೆಯುತ್ತದೆ. ಆದರೆ ಆ ಸ್ಥಳವನ್ನು ಮಾತ್ರ ಸ್ವಚ್ಛವಾಗಿ ಇರಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss