ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು..?

Health Tips: ಇಂದಿನ ಕಾಲದಲ್ಲಿ ಹಲವು ಹೆಣ್ಣು ಮಕ್ಕಳ ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವುದು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರುತ್ತದೆ. ಈ ವೇಳೆ ನಾವು ಹೊಸ ಹೊಸ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇದು ತಪ್ಪು ಈ ಸಮಸ್ಯೆಗೆ ನೈಸರ್ಗಿಕವಾದ ಮನೆ ಮದ್ದನ್ನು ಬಳಸಬೇಕು. ಮಿತಿಮೀರಿದರೆ, ವೈದ್ಯರ ಬಳಿ ಸಲಹೆ ಪಡೆಯಬೇಕು.

ವೈದ್ಯೆಯಾದ ಡಾ.ದೀಪಿಕಾ ಕೂದಲು ಉದುರುವಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಲೆಯಲ್ಲಿ ಡ್ಯಾಂಡ್ರಫ್ ಹೆಚ್ಚಾದಾಗ, ಕೂದಲು ಉದುರುವಿಕೆಯೂ ಹೆಚ್ಚಾಗುತ್ತದೆ. ಚರ್ಮ ಒಣಗುವ ರೀತಿ, ಕೂದಲೂ ಕೂಡ ಒಣಗುತ್ತದೆ. ಈ ವೇಳೆ ತ್ವಚೆಯ ಆರೈಕೆ ಮಾಡಿಕೊಂಡ ಹಾಗೆ, ಕೂದಲ ಆರೈಕೆ ನಾವು ಮಾಡಿಕೊಳ್ಳಬೇಕು.

ತ್ವಚೆಗೆ ಮಾಯಿಸ್ಶಚರೈಸಿಂಗ್ ಕ್ರೀಮ್ ಹಚ್ಚಿದ ರೀತಿ, ತಲೆಗೂದಲಿಗೆ ಸೂಟ್ ಆಗುವ ಸೇರಮ್ ಬಳಸಬೇಕು. ತಲೆಸ್ನಾನಕ್ಕೂ ಮುನ್ನ ಎಣ್ಣೆ ಮಸಾಜ್ ಮಾಡಬೇಕು. ಉತ್ತಮ ಕ್ವಾಲಿಟಿಯ ಶ್ಯಾಂಪೂ ಬಳಸಬೇಕು. ಆದರೆ ಆ ಶ್ಯಾಂಪೂವಿನಿಂದ ನಿಮ್ಮ ಕೂದಲಿಗೆ ಯಾವುದೇ ಹಾನಿಯಾಗಬಾರದು. ಮನೆಯಲ್ಲೇ ಆಯುರ್ವೇದಿಕ್ ಶ್ಯಾಂಪೂ ತಯಾರಿಸಿ ಬಳಸಿದರೆ ಉತ್ತಮ. ಅಲ್ಲದೇ, ಹೇರ್ ಸ್ಟ್ರೇಟ್ನಿಂಗ್, ಹೇರ್ ಸ್ಪ್ರೇ, ಹೇರ್ ಸ್ಮೂತ್ನಿಂಗ್ ಸೇರಿ ಕೂದಲಿಗೆ ಸಂಬಂಧಿಸಿದ ಯಾವುದೇ, ಚಿಕಿತ್ಸೆ ಪಡೆಯಬಾರದು. ಇದರಿಂದಲೇ, ಹೆಚ್ಚು ಕೂದಲು ಉದುರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author