Health Tips: ಇಂದಿನ ಕಾಲದಲ್ಲಿ ಯುವಕ ಯುವತಿಯರಿಗೂ ಕೈ ಕಾಲು ನೋವು, ಸೊಂಟ ನೋವು ಹೆಚ್ಚಾಗಿದೆ. ಮೂಳೆ ಸವೆತ ಉಂಟಾದಾಗಲೇ ಇಂಥ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳ್ತಾರೆ..? ಚಿಕ್ಕ ವಯಸ್ಸಿನಲ್ಲೇ ಮೂಳೆಗಳ ಆರೋಗ್ಯ ಸಮಸ್ಯೆ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ವಯಸ್ಸಾದಾಗ ನಮ್ಮ ಮೂಳೆಗಳು ಸವೆದು ಹೋಗುತ್ತದೆ. ಆಗ ಮಂಡಿ ನೋವು, ಕೈ ಕಾಲು ನೋವು, ಸೊಂಟ ನೋವೆಲ್ಲ ಬರುತ್ತದೆ. ಹಾಗಂತ ಎಲ್ಲರಿಗೂ ಈ ರೀತಿ ಸಮಸ್ಯೆಯಾಗಬೇಕು ಅಂತಿಲ್ಲ. ಏಕೆಂದರೆ, ನಾವು ಯಾವ ರೀತಿಯ ಜೀವನ ಮಾಡುತ್ತೆವೋ, ಅದರ ಮೇಲೆ ಮೂಳೆ ಸವೆತ ಡಿಪೆಂಡ್ ಆಗಿರುತ್ತದೆ. ಯಾರು ಸರಿಯಾದ ಸಮಯಕ್ಕೆ ನಿದ್ರಿಸುತ್ತಾರೋ, ಬೆಳಿಗ್ಗೆ ಬೇಗ ಎದ್ದು, ಆರೋಗ್ಯಕರ ತಿಂಡಿ ತಿನ್ನುತ್ತಾರೋ, ಮಧ್ಯಾಹ್ನ ಉತ್ತಮ ಆಹಾರ ಸೇವಿಸುತ್ತಾರೋ, ವಾಕಿಂಗ್, ವ್ಯಾಯಾಮ ಮಾಡುತ್ತಾರೋ, ಹೆಚ್ಚು ಶುದ್ಧ ನೀರು ಕುಡಿಯುತ್ತಾರೋ, ಹಣು, ತರಕಾರಿ, ಸೊಪ್ಪು, ಹಾಲು, ಮೊಸರು, ತುಪ್ಪ, ಸೇರಿ ಆರೋಗ್ಯಕರ ಪದಾರ್ಥ ಸೇವಿಸುತ್ತಾರೋ ಅಂಥವರ ಆರೋಗ್ಯ ಚೆನ್ನಾಗಿರುತ್ತದೆ.
ಅಂಥವರು ವಯಸ್ಸಾದರೂ ಗಟ್ಟಿಮುಟ್ಟಾಗಿರುತ್ತಾರೆ. ಆದರೆ ಇಂದಿನ ಜೀವನ ಶೈಲಿಗೆ ಒಗ್ಗಿಕೊಂಡವರ ಜೀವನದಲ್ಲೇ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಊಟ ತಿಂಡಿಗೆ ನಿದ್ರೆಗೆ ಸರಿಯಾದ ಸಮಯವಿಲ್ಲ. ಯಾವಾಗ ಬೇಕಾದ್ರೂ ತಿನ್ನುವುದು, ಮಲಗುವುದು. ಮೆಟ್ಟಿಲು ಬಳಸದೇ ಇರುವುದು. ನಡೆಯದಿರುವುದು. ಲಿಫ್ಟ್ ವಾಹನದಲ್ಲೇ ಓಡಾಡುವುದು. ಜಂಕ್ ಫುಡ್ ಸೇವನೆ. ಇಂಥ ಜೀವನ ಶೈಲಿಯಿಂದಲೇ ಆರೋಗ್ಯ ಹಾಳಾಗುತ್ತದೆ.
ಇನ್ನು ನಿಂತರೆ, ಹೆಚ್ಚು ಹೊತ್ತು ಕೂತರೆ, ವಾಹನದಲ್ಲಿ ಹೆಚ್ಚು ಹೊತ್ತು ಪ್ರಯಾಣಿಸಿದರೆ ಕಾಲು ನೋವಾಗುತ್ತದೆ ಎಂದಾದಲ್ಲಿ, ಅದು ಮೂಳೆ ಸವೆಯುವ ಲಕ್ಷಣವಾಗಿರುತ್ತದೆ. ಈ ವೇಳೆ ಮೂಳೆಯಲ್ಲಿ ಶಕ್ತಿ ಕುಸಿದ ಪರಿಣಾಮವೇ, ನಮಗೆ ಸುಸ್ತಾಗುತ್ತದೆ. ಇದಕ್ಕೆ ಮತ್ತೊಂದು ಕಾರಣ ಅಂದ್ರೆ, ವಿಟಾಮಿನ್ ಡಿ ಕೊರತೆ ಉಂಟಾದ ಪರಿಣಾಮ, ಮೂಳೆಯ ಆರೋಗ್ಯ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..