Health Tips: ಕೆಲವರಿಗೆ ಮದ್ಯಪಾನ ಮಾಡುವುದು ಚಟವಾದರೆ ಇನ್ನು ಕೆಲವರಿಗೆ ಶೋಕಿ. ಶೋಕಿಗಾದರೂ ಪ್ರತಿದಿನ ಕೆಲವರು ಮದ್ಯಪಾನ ಮಾಡುವವರಿದ್ದಾರೆ. ಆದರೆ ಇದು ಅದೆಷ್ಟು ಕೆಟ್ಟ ಚಟವಂದ್ರೆ, ಇದರಿಂದ ಹಲವಾರು ರೋಗ ರುಜಿನ ಶುರುವಾಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದು, ಅತಿಯಾದ ಮದ್ಯಪಾನ ಮಾಡುವುದರಿಂದ ರಕ್ತ ವಾಂತಿಯಾಗುವ ಸಾಧ್ಯತೆ ಇರುತ್ತದೆ. ಅನ್ನನಾಳದ ಮೇಲೆ ಮದ್ಯಪಾನದ ಸೇವನೆ ಕೆಟ್ಟ ಪರಿಣಾಮ ಬೀರುತ್ತದೆ. ಆಗಲೇ, ರಕ್ತ ವಾಂತಿಯಂಥ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಕುಡಿದಾಗ, ಮನುಷ್ಯನಿಗೆ ಸ್ವಯವಿರುವುದಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಾನೆ. ಹಾಗಾಗಿ ಜಗಳವಾಗುತ್ತದೆ. ಅಪಘಾತವಾಗುವ ಸಂಭವ ಹೆಚ್ಚಿದೆ. ಹಾಗಾಗಿ ಮದ್ಯಪಾನದ ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ, ಕಿಡ್ನಿ ಫೇಲ್ ಆಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.
ಮದ್ಯಪಾನದ ಸೇವನೆ ಅತೀ ಹೆಚ್ಚಾದಲ್ಲಿ, ಭವಿಷ್ಯದಲ್ಲಿ ಅವನ ಮಾನಸಿಕ ಆರೋಗ್ಯದ ಮೇಲೆ ಹಿಡಿತ ತಪ್ಪಬಹುದು. ಕೋಮಾಗೆ ಹೋಗಬಹುದು. ಚಿಕ್ಕ ವಯಸ್ಸಿನಲ್ಲಿಯೇ ಮಾರಣಾಂತಿಕ ಖಾಯಿಲೆ ಬಂದು ಮರಣ ಸಂಭವಿಸಬಹುದು. ಹಾಗಾಗಿ ಮದ್ಯಪಾನ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..