Recipe: ತೊಂಡೆಕಾಯಿ ಗ್ರೇವಿ ಮಾಡಲು ಒಂದು ಕಪ್ ತೊಂಡೆಕಾಯಿ, ಕತ್ತರಿಸಿದ 1 ಈರುಳ್ಳಿ, ಒಂದು ಕಪ್ ತೆಂಗಿನತುರಿ, ಕೊಂಚ ಹುಣಸೆಹಣ್ಣು, ನಾಲ್ಕು ಒಣಮೆಣಸಿನಕಾಯಿ, ಒಂದು ಸ್ಪೂನ್ ಉದ್ದಿನ ಬೇಳೆ, ಕೊತ್ತೊಂಬರಿ ಕಾಳು, ಕೊಂಚ ಜೀರಿಗೆ, ಹುರಿದ ಶೇಂಗಾಬೀಜ, ಬೆಲ್ಲ, ಚಿಟಿಕೆ ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಬೇವು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ, ಉಪ್ಪು.
ಮಾಡುವ ವಿಧಾನ: ಮೊದಲು ತೊಂಡೆಕಾಯಿಯನ್ನು ಸ್ವಚ್ಛವಾಗಿ ತೊಳೆದಿಡಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎಣ್ಣೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಜೀರಿಗೆಯನ್ನು ಹುರಿದುಕೊಳ್ಳಬೇಕು. ಇದರೊಂದಿಗೆ ಕೊಂಚ ಮೆಂತ್ಯೆ ಕಾಳು ಹುರಿದುಕೊಳ್ಳಬೇಕು. ಬಳಿಕ ತೆಂಗಿನ ತುರಿ, ಬೆಲ್ಲ, ಹುರಿದುಕೊಂಡ ಪದಾರ್ಥ, ಹಿಂಗು, ಹುಣಸೆಹಣ್ಣು ಹಾಕಿ ರುಬ್ಬಿ ಗ್ರೇವಿ ತಯಾರಿಸಿಕೊಳ್ಳಿ.
ಬಳಿಕ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ತೊಂಡೆಕಾಯಿ ಹಾಕಿ ಹುರಿದು, ಕೊಂಚ ಉಪ್ಪು, ನೀರು ಹಾಕಿ ಬೇಯಿಸಿ. ತೊಂಡೆ ಬೆಂದ ಬಳಿಕ, ರುಬ್ಬಿದ ಗ್ರೇವಿ ಹಾಕಿ ಕುದಿಸಿ, ಬಳಿಕ ಹುರಿದ ಶೇಂಗಾಬೀಜ ಮತ್ತು ಕೊತ್ತೊಂಬರಿ ಸೊಪ್ಪು ಹಾಕಿದ್ರೆ, ಗೇವಿ ರೆಡಿ. ಚಪಾತಿಯೊಂದಿಗೆ ಈ ಗ್ರೇವಿ ಉತ್ತಮ ಕಾಂಬಿನೇಷನ್.