ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..

Recipe: ಬೆಳ್ಳುಳ್ಳಿ ಚಟ್ನಿ ತಯಾರಿಸಲು, ಒಂದು ಕಪ್ ಕಾಯಿತುರಿ, 5ರಿಂದ 6 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು.

ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ. ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುರಿದ ಸಾಮಗ್ರಿ, ಹುಣಸೆ, ಉಪ್ಪು, ನೀರು ಹಾಕಿ, ರುಬ್ಬಿದರೆ, ಚಟ್ನಿ ರೆಡಿ. ಅವಶ್ಯಕತೆ ಇದ್ದಲ್ಲಿ ಒಗ್ಗರಣೆ ಹಾಕಿಕೊಳ್ಳಬಹುದು. ನೀರು ಹೆಚ್ಚು ಹಾಕಿ ರುಬ್ಬಿದರೆ, ದೋಸೆ, ಇಡ್ಲಿಗೆ ಇದು ಉತ್ತಮ ಕಾಂಬಿನೇಷನ್. ಗಟ್ಟಿ ಚಟ್ನಿಯಾದ್ರೆ ಅನ್ನ ತುಪ್ಪಕ್ಕೆ ಹಾಕಿ ತಿನ್ನಬಹುದು.

ಇನ್ನು ಉದ್ದಿನ ಬೇಳೆ ಚಟ್ನಿ ಮಾಡಲು, ಒಂದು ಕಪ್ ಕಾಯಿತುರಿ, ಎರಡು ಸ್ಪೂನ್ ಉದ್ದಿನಬೇಳೆ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು.

ಮೊದಲು ಪ್ಯಾನ್ ಬಿಸಿ ಮಾಡಿ, ಒಣಮೆಣಸು, ಉದ್ದಿನ ಬೇಳೆ ಹುರಿದುಕೊಳ್ಳಿ. ಬಳಿಕ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುರಿದ ಸಾಮಗ್ರಿ, ಹುಣಸೆ, ಉಪ್ಪು, ನೀರು ಹಾಕಿ ರುಬ್ಬಿದ್ರೆ ಚಟ್ನಿ ರೆಡಿ. ಇದಕ್ಕೆ ಸಾಸಿವೆ, ಕರಿಬೇವು ಬಳಸಿ ಒಗ್ಗರಣೆ ಕೊಡಿ.

ವೆಜ್ ಸ್ಯಾಂಡ್ವಿಚ್ ರೆಸಿಪಿ

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

ವೆಜ್ ಬರ್ಗರ್ ರೆಸಿಪಿ

About The Author