Health Tips: ವೈದ್ಯರಾದ ಸಿದ್ಧಾರ್ಥ ಗೋಸಾವಿ ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ, ವ್ಯಾಯಾಮ ಹೇಗೆ ಮಾಡಬೇಕು..? ಯಾವ ಸಮಯದಲ್ಲಿ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ಕೂಡ ವೈದ್ಯರು ಬಿಪಿ ಚೆಕಪ್ ಬಗ್ಗೆ ವಿವರಿಸಿದ್ದು, 4 ತಿಂಗಳಿಗೊಮ್ಮೆ ಬಿಪಿ ಚೆಕಪ್ ಮಾಡಿಸಿಕೊಳ್ಳದಿದ್ದಲ್ಲಿ, ಏನಾಗುತ್ತದೆ ಅಂತಾ ವಿವರಿಸಿದ್ದಾರೆ.
ಬಿಪಿ ಇರುವವರು ಯಾಕೆ 4 ತಿಂಗಳಿಗೊಮ್ಮೆ ಬಿಪಿ ಚೆಕಪ್ ಮಾಡಿಸಿಕೊಳ್ಳಬೇಕು ಅಂದ್ರೆ, ಇವರು ತೆಗೆದುಕೊಳ್ಳುವ ಮಾತ್ರೆಯನ್ನು ಪದೇ ಪದೇ ಚೇಂಜ್ ಮಾಡಬೇಕಾಗುತ್ತದೆ. ಅದು ಯಾವಾಗ ಚೇಂಜ್ ಮಾಡಬೇಕು ಅನ್ನೋದು ವೈದ್ಯರಿಗೆ ಗೊತ್ತಿರುತ್ತದೆ. ಹಾಗಾಗಿ ವೈದ್ಯರ ಬಳಿ ಹೋಗಿ ಬಿಪಿ ಚೆಕಪ್ ಮಾಡಿಸಿಕೊಂಡು, ಮಾತ್ರೆ ತೆಗೆದುಕೊಳ್ಳುವ ಬಗ್ಗೆ ತಿಳಿದುಕೊಳ್ಳಬಹುದು.
ಇಲ್ಲವಾದಲ್ಲಿ, ಒಂದೇ ಮಾತ್ರೆ ವರ್ಷಗಟ್ಟಲೆ ತೆಗೆದುಕೊಂಡರೆ, ಅದರಿಂದ ಆರೋಗ್ಯಕ್ಕೆ ಸೈಡ್ ಎಫೆಕ್ಟ್ ಆಗುತ್ತದೆ. ಹಾಗಾಗಿ 4 ತಿಂಗಳಿಗೊಮ್ಮೆ ಬಿಪಿ ಚೆಕಪ್ ಮಾಡಿಸಿಕೊಳ್ಳಬೇಕು. ನೀವು ನಿರ್ಲಕ್ಷ್ಯ ಮಾಡಿದ್ದಲ್ಲಿ, ಕಿಡ್ನಿ ಡ್ಯಾಮೇಜ್, ಕಣ್ಣಿನ ಡ್ಯಾಮೇಜ್, ಸ್ಟ್ರೋಕ್, ಸೇರಿ ಹಲವು ಆರೋಗ್ಯ ತೊಂದರೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..