Health Tips: ವೈದ್ಯರಾದ ಚಂದ್ರಿಕಾ ಆನಂದ್ ತಾಯಿತನದ ಬಗ್ಗೆ, ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರೊಂದಿಗೆ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಗರ್ಭಿಣಿಯರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಅದು ಕಡಿಮೆಯೇ. ಅದರಲ್ಲೂ ಹೊರಗೆ ತಿರುಗಾಡಲು ಹೋಗುವಾಗ, ಯಾವುದೇ ಕಾರಣಕ್ಕೂ ಗರ್ಭಿಣಿಯಾದವಳು ಹೀಲ್ಸ್ ಧರಿಸಲೇಬಾರದು. ನೀವು ವೈದ್ಯರ ಬಳಿ ಹೋದಾಗ, ವೈದ್ಯರು ನಿಮ್ಮನ್ನು ನೋಡಿದ ತಕ್ಷಣ ಕೊಡುವ ಸಲಹೆಗಳಲ್ಲಿ ಇದೂ ಕೂಡ ಒಂದು. ಏಕೆಂದರೆ, ಗರ್ಭಿಣಿ ಹೀಲ್ಸ್ ಧರಿಸುವುದರಿಂದ, ಮಗುವಿಗೆ ಅಪಾಯವಾಗುತ್ತದೆ.
ಹೀಗಾಗಿ ಮಗು ಆರೋಗ್ಯವಾಗಿ ನಿಮ್ಮ ಕೈ ಸೇರಬೇಕು ಅಂದ್ರೆ ನೀವು ಹೀಲ್ಸ್ ಧರಿಸಬಾರದು. ಹೀಲ್ಸ್ ಧರಿಸಿ, ಅಪ್ಪಿ ತಪ್ಪಿ ಎಡವಿ ಬಿದ್ದರೆ, ಗರ್ಭಿಣಿಯ ಕಾಲಿಗೂ ಪೆಟ್ಟು, ಹೊಟ್ಟೆಯಲ್ಲಿರುವ ಮಗುವಿಗೂ ಪೆಟ್ಟಾಗುತ್ತದೆ. ಹಾಗಾಗಿ ಹೀಲ್ಸ್ ಧರಿಸಬಾರದು. ದೇಹಕ್ಕೆ ಬಿಗಿಯಾಗುವ ಬಟ್ಟೆ ಧರಿಸಬಾರದು. ಫ್ಲ್ಯಾಟ್ ಚಪ್ಪಲಿಗಳಲನ್ನೇ ಧರಿಸಬೇಕು. ಖಾಲಿ ಕಾಲಿನಲ್ಲಿ ನಡೆಯಬಾರದು. ಏಕೆಂದರೆ, ಕೀಟಾಣುಗಳು ಪಾದದ ಮೂಲಕ ನಿಮ್ಮ ದೇಹ ಸೇರುತ್ತದೆ. ಹಾಗಾಗಿ ಯಾವಾಗಲೂ ಫ್ಲ್ಯಾಟ್ ಚಪ್ಪಲಿ ಧರಿಸಿಯೇ ಓಡಾಡಿ.
ಒಂದೇ ಕಡೆ ಕೂರಬಾರದು. ಒಂದೇ ಕಡೆ ಮಲಗಬಾರದು. ಹೀಗೆ ಮಾಡಿದಾಗ, ಬೆನ್ನು ನೋವು ಸೇರಿ ದೇಹದ ಹಲವು ಕಡೆ ನೋವುಂಟಾಗುತ್ತದೆ. ಇಷ್ಟೇ ಅಲ್ಲದೇ, ಗರ್ಭಿಣಿಯಾದವಳು, ಆಹಾರದ ಕಡೆಯೂ ಗಮನ ಕೊಡಬೇಕು. ಫ್ರೆಶ್ ಆಗಿರುವ ಆಹಾರವನ್ನೇ ತಿನ್ನಬೇಕು. ಹೆಚ್ಚು ಜಂಕ್ ಫುಡ್ ಸೇವನೆ ಮಾಡಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..