Political News: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ರಾಜಮಾತೆ ಪ್ರಮೋದಾದೇವಿ ಕೂಡ ಅಲ್ಲಿ ಉಪಸ್ಥಿತರಿದ್ದರು.
ಇನ್ನು ನಾಮಪತ್ರ ಸಲ್ಲಿಸುವ ವೇಳೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ಹೇಳಬೇಕಾಗುತ್ತದೆ. ಈ ವೇಳೆ ಯದುವೀರ್ ಅವರ ಬಳಿ 4,99,59,303 ರೂಪಾಯಿ ಚರಾಸ್ತಿ ಹೊಂದಿದ್ದಾರೆಂದು ತಿಳಿದು ಬಂದಿದೆ. ಆದರೆ ಯದುವೀರ್ ಅವರ ಬಳಿ ಸ್ವಂತ ಮನೆ ಮತ್ತು ಕೃಷಿ ಭೂಮಿ ಇಲ್ಲ ಅಂತಾ ಹೇಳಲಾಗಿದೆ.
ಯದುವೀರ್ ಅವರ ಎರಡು ಬ್ಯಾಂಕ್‌ಗಳಲ್ಲಿ 23ವರೆ ಲಕ್ಷ ದುಡ್ಡಿದೆ. ಕೈಯಲ್ಲಿ ಒಂದು ಲಕ್ಷವಿದೆಯಂತೆ. 1 ಕೋಟಿ ಮೌಲ್ಯದ ಶೇರ್ ಸೇರಿ ಬೇರೆ ಬೇರೆ ಬಾಂಡ್‌ಗಳನ್ನು ಬೇರೆ ಬೇರೆ ಕಂಪನಿಗಳಲ್ಲಿ ಯದುವೀರ್ ಹೊಂದಿದ್ದಾರೆ. ಇದಲ್ಲದೇ 4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಇದೆ ಎಂದು ಯದುವೀರ್ ನಾಮಪತ್ರಿಕೆ ಸಲ್ಲಿಕೆ ವೇಳೆ ತಿಳಿದು ಬಂದಿದೆ.
ಇದು ಆಸ್ತಿ ವಿಷಯವಾದರೆ, ಯದುವೀರ್ ಎಲ್ಲೂ ಸಾಲ ತೆಗೆದುೊಂಡಿಲ್ಲ. ಅವರ ಮೇಲೆ ಯಾವುದೇ ಪೊಲೀಸ್ ಕೇಸ್ ಇಲ್ಲ. ಟ್ಯಾಕ್ಸ್ ಕೂಡ ಪೂರ್ತಿ ಕಟ್ಟಿದ್ದಾರೆ.