ಬೆಳಗಾವಿಯಲ್ಲಿ ಮನೆ ಖರೀದಿಸಿದ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್..

Political news: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಗದೀಶ್ ಶೆಟ್ಟರ್, ತಾವು ಬೆಳಗಾವಿಯಲ್ಲಿ ಒಂದು ಮನೆ ಮಾಡುವುದಾಗಿ ಹೇಳಿದ್ದರು. ಅದರಂತೆ ಶೆಟ್ಟರ್ ಇಂದು ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶೆಟ್ಟರ್, ಬೆಳಗಾವಿ ಜನತೆಗೆ ಕೊಟ್ಟ ಮಾತಿನಂತೆ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಲ್ಲಿ ಮನೆ ಮಾಡಿದ್ದೇನೆ. ಬೆಳಗಾವಿ ಜನತೆಯೇ ನನ್ನ ಪರಿವಾರ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್‌ಗೆ ವಿಧಾನಸಭೆ ಎಲೆಕ್ಷನ್‌ನಲ್ಲಿ ಟಿಕೇಟ್ ಸಿಗದ ಕಾರಣ, ಮುನಿಸಿಕೊಂಡು ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ್ದರು. ಆದರೆ ಲೋಕಸಭೆ ಚುನಾವಣೆ ಹತ್ತಿರ ಬಂದಾಗ, ಶೆಟ್ಟರ್ ಮನವೊಲಿಸಿ, ಬಿಜೆಪಿಗೆ ಕರೆತರಲಾಗಿತ್ತು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಶೆಟ್ಟರ್ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು. ಆದರೆ ಧಾರವಾಡ ಟಿಕೇಟ್ ಪ್ರಹ್ಲಾದ್ ಜೋಶಿ ಅವರಿಗೆ ಸಿಕ್ಕ ಬಳಿಕ, ಮತ್ತೆ ಗೊಂದಲ ಉಂಟಾಗಿತ್ತು.

ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೇಟ್ ಶೆಟ್ಟರ್ ಪಾಲಾಗಿದ್ದು, ಇದೀಗ ಶೆಟ್ಟರ್ ಬೆಳಗಾವಿಯಲ್ಲೇ ಮನೆಯೂ ಖರೀದಿಸಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬೆಳಗಾವಿಗೆ ಬಂದು, ಶೆಟ್ಟರ್ ಪರ ಕ್ಯಾಂಪೇನ್ ಮಾಡಿದ್ದರು.

ಗೃಹಲಕ್ಷ್ಮೀ ಹಣದಿಂದ ಫ್ರಿಜ್ ಖರೀದಿಸಿದ ಮಹಿಳೆ: ಸಾರ್ಥಕತೆಯ ಭಾವ ಎಂದ ಡಿಸಿಎಂ ಡಿಕೆಶಿ

ಕಂಪನಿಯೊಂದಕ್ಕೆ ನೀಡಿದ್ದ ಸಮೋಸಾದಲ್ಲಿ ಕಂಡುಬಂದಿದ್ದು ಕಾಂಡೋಮ್, ಗುಟ್ಕಾ..

ರಂಜಾನ್ ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ಈದ್ ಉಲ್ ಫಿತರ್ ಆಚರಣೆ

About The Author