ಪತ್ನಿಯನ್ನು ಕೊಂ*ದು ಆಕೆಯ ಇನ್ಶುರೆನ್ಸ್‌ನಲ್ಲಿ ಬಂದ ಹಣವನ್ನು ಪತಿ ಬಳಸಿದ್ದು ಹೇಗೆ ಗೊತ್ತಾ..?

International News: ಅಮೆರಿಕದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಅವನಿಗೆ ಸಿಕ್ಕ ಆಕೆಯ ಇನ್‌ಶುರೆನ್ಸ್ ಹಣದಿಂದ ಸೆಕ್ಸ್ ಟಾಯ್‌ ಖರೀದಿಸಿದ್ದಾನೆ.

ಈ ಘಟನೆ ನಡೆದಿದ್ದು 2019ರಲ್ಲಿ ಆದರೆ ಈ ಬಗ್ಗೆ ಪೊಲೀಸರಿಗೆ ವರ್ಷದ ಬಳಿಕ ಮಾಹಿತಿ ಸಿಕ್ಕಿದ್ದು, ಈತನನ್ನು ಬಂಧಿಸಲಾಗಿತ್ತು. ಬಳಿಕ ಈಗ ಈತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಮೆರಿಕಾದ ಕ್ಯಾನ್ಸಾಸ್ ಹೇಸ್‌ನಲ್ಲಿ ಈ ಘಟನೆ ನಡೆದಿದ್ದು, ಕೋಲ್ಬಿ ಟ್ರಿಕಲ್‌ ಎಂಬಾತ ಪತ್ನಿಗೆ ಗುಂಡು ಹಾರಿಸಿ, ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ.

ಆ ವೇಳೆ ಪೊಲೀಸರಿಗೆ ಪತಿ ಮಾಡಿದ ಕೊಲೆ ಅಲ್ಲ. ಬದಲಾಗಿ ಪತ್ನಿಯೇ ಸಾವನ್ನಪ್ಪಿದ್ದಾಳೆಂದು ತಿಳಿದಿದ್ದರು. ಬಳಿಕ ಈ ಬಗ್ಗೆ ವರ್ಷಗಳ ಬಳಿಕ ತನಿಖೆ ನಡೆದಾಗ, ಆಕೆ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಬದಲಾಗಿ, ಪತಿಯೇ ಪತ್ನಿಯ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ಅಲ್ಲದೇ, ಆಕೆ ಸತ್ತ ಬಳಿಕ, ಪತಿಗೆ ಸಿಕ್ಕ ಇನ್ಶುರೆನ್ಸ್ ಹಣದಲ್ಲಿ ಈ ಸೈಕೋ ಸೆಕ್ಸ್ ಟಾಯ್‌ ಖರೀದಿಸಿದ್ದಾನೆ.

ಅಲ್ಲದೇ, ಪತ್ನಿ ಸತ್ತ ಕೆಲ ತಿಂಗಳಲ್ಲೇ ಆಕೆಯ ಇನ್ಶುರೆನ್ಸ್ ಹಣದಿಂದ ಹಲವು ವಸ್ತುಗಳನ್ನು ಖರೀದಿಸಿದ್ದಾನೆ. ಅಲ್ಲದೇ, ಪತ್ನಿ ಸತ್ತ ದಿನ ಆಕೆಯ ಮೊಬೈಲ್‌ನಲ್ಲಿ ಮರುದಿನದ ಅಲಾಂ ಇಟ್ಟಿದ್ದನ್ನು ಪೊಲೀಸರು ಗಮನಿಸಿದ್ದಾರೆ. ಹೀಗೆ ಹಲವು ಬಾರಿ ಬಂದು ಸಾವಿನ ಬಗ್ಗೆ ವಿಚಾರಣೆ ನಡೆಸಿದಾಗಲೇ, ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತಾ ಗೊತ್ತಾಗಿದೆ. ಬಳಿಕ ಈತನನ್ನು ಅರೆಸ್ಟ್ ಮಾಡಿ, ಜೈಲಿಗೆ ಹಾಕಲಾಗಿದೆ. ಆರೋಪ ಸಾಬೀತಾದ ಬಳಿಕ, ಜೀವಾವಧಿ ಶಿಕ್ಷೆ ನೀಡಲಾಗಿದೆ.

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಮತದಾನ ಜಾಗೃತಿ ಮೂಡಿಸಿ ಗಮನಸೆಳೆದ ಪುಟಾಣಿಗಳು

ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

About The Author