Friday, October 17, 2025

Latest Posts

Political News: 3 ಡಿಸಿಎಂ ಸ್ಥಾನ ಸೃಷ್ಟಿ? ಈ ಮೂವರಿಗೆ ಡಿಸಿಎಂ ಪಟ್ಟ?

- Advertisement -

Political News: ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನ ಬೇಡಿಕೆ ಹುಟ್ಟಿಕೊಂಡಿದೆ. ಚುನಾವಣೆ ಆರಂಭದಲ್ಲೆ ಸಚಿವ ರಾಜಣ್ಣ ಅವರು ಹಲವು ಬಾರಿ ಮೂರು ಡಿಸಿಎಂ ಸ್ಥಾನ ಸೃಷ್ಟಿ ಬಗ್ಗೆ ಮಾತನಾಡಿದ್ದರು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಮೂರು ಡಿಸಿಎಂ ಸ್ಥಾನದ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಬಣ ತಿಕ್ಕಾಟ ಮತ್ತೆ ಆರಂಭವಾಗುವ ಸೂಚನೆ ಸಿಕ್ಕಿದೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿಸಿಎಂ ಡಿಕೆ ಶಿವಕುಮಾರ್, ಸ್ವತಃ ತಮ್ಮ ಸಹೋದರ ಡಿ.ಕೆ.ಶಿವಕುಮಾರ ಅವರನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಗಲಿಲ್ಲ. ಒಕ್ಕಲಿಗರ ಮತಗಳು ಹೆಚ್ಚಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಶೇಕಾಡವರು ಮತಗಳಿಕೆ ಕಡಿಮೆಯಾಗಿದೆ. ಹೀಗಾಗಿ, ದಲಿತ, ಮುಸ್ಲಿಂ, ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ಸಹಕಾರಿ ಸಚಿವ ರಾಜಣ್ಣ ಅವರು ಇದೀಗ ಮತ್ತೆ ಹೆಚ್ಚುವರಿ ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೂವರಿಗೆ ಡಿಸಿಎಂ ಸ್ಥಾನ ನೀಡಿದರೆ ಅದು ಅನುಕೂಲವಾಗಲಿದೆ ಎಂದಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವುದೇ ಹೇಳಿಕೆ ಕೊಡದಂತೆ ತಿಳಿಸಿದ್ದರು. ಅದಕ್ಕೆ ಸುಮ್ಮನಾಗಿದ್ದೆ ಎಂದಿದ್ದಾರೆ.

ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನ ನೀಡುವುದರಿಂದ ಸಮುದಾಯದವಾರು ಮತ ಸೆಳೆಯಲು ಅವಕಾಶ ಆಗಲಿದೆ ಎಂಬುವುದು ಕಾಂಗ್ರೆಸ್ ಒಂದು ಬಣದ ವಾದ. ಲೋಕಸಭೆ ಚುನಾವಣೆಗೂ ಮುನ್ನ ಈ ಬೇಡಿಕೆ ಇಡಲಾಗಿತ್ತು. ದಲಿತ, ಮುಸ್ಲಿಂ, ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಇದಕ್ಕೆ ಡಿಕೆಶಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ, ಹೈಕಮಾಂಡ್ ಮಧ್ಯ ಪ್ರವೇಶಿಸಿ ಈ ಕುರಿತು ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿತ್ತು.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರ ಬಣದ ಪ್ರಕಾರ ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿಮಾಡಬೇಕು ಎನ್ನುವುದಾಗಿ. ದಲಿತ ಸಮುದಾಯದಿಂದ ಡಾ.ಜಿ.ಪರಮೇಶ್ವರ್, ಮುಸ್ಲಿಂ ಸಮುದಾಯದಿಂದ ಜಮೀರ್ ಅಹ್ಮದ್, ಲಿಂಗಾಯತ ಕೋಟಾದಿಂದ ಎಂ.ಬಿ.ಪಾಟೀಲ್, ಎಸ್​ಟಿ ಸಮುದಾಯದಿಂದ ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಕೊಡಬೇಕೆಂಬ ಆಗ್ರಹ ಕೇಳಿಬಂದಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

ಮಿಲಿಟರಿ ವಿಮಾನ ಪತನ: ಮಲಾವಿಯ ಉಪಾಧ್ಯಕ್ಷ ಸೇರಿ 9 ಜನರ ದುರ್ಮರಣ

ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್‌ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್

- Advertisement -

Latest Posts

Don't Miss