Health Tips: ನಿದ್ರೆ ಬರುವ ಸಮಯದಲ್ಲಿ ಆಕಳಿಕೆ ಬರುವುದು ಸಹಜ. ಆದರೆ ನಿದ್ರಿಸಿ ಆದ ಬಳಿಕವೂ, ಪದೇ ಪದೇ ಆಕಳಿಕೆ ಬರುತ್ತದೆ. ಆದರೆ ನಿದ್ರೆ ಬರದ ಸಮಯದಲ್ಲಿ ಆಕಳಿಕೆ ಬಂದಾಗ, ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ ಅಂತಾ ನಾವು ಹೇಳುತ್ತೇವೆ. ಆದರೆ ಇದಕ್ಕೆ ಕಾರಣವೇ ಬೇರೆ ಇದೆ. ಹಾಗಾದ್ರೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..
ಡಾ.ಆಂಜಿನಪ್ಪ ನಮಗೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ. ಮೆದುಳಿಗೆ ಆಕ್ಸಿಜನ್ ಸಾಕಾಗದೇ ಇದ್ದಾಗ, ಆಕಳಿಕೆ ಬರುತ್ತದೆ. ಅಂದರೆ ನಮಗೆ ನಿದ್ದೆ ಸಾಕಾಗದೇ ಇದ್ದಾಗಲೂ ಆಕಳಿಕೆ ಬರುತ್ತದೆ. ಮತ್ತು ಆಕಳಿಕೆ ಬರುವುದು ನಿದ್ದೆ ಬರುವುದರ ಸೂಚನೆಯಾಗಿದೆ.
ಅದರಲ್ಲೂ ಗಾಡಿ ಓಡಿಸುವ ವ್ಯಕ್ತಿಗೆ ಪದೇ ಪದೇ ಆಕಳಿಕೆ ಬಂದರೆ, ಅವರು ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿ, ಕೊಂಚ ಹೊತ್ತು ನಿದ್ರಿಸುವುದು ಉತ್ತಮ. ಇಲ್ಲದಿದ್ದಲ್ಲಿ ನಿದ್ರೆ ಮಂಪರಿನಲ್ಲಿ ಅಪಘಾತವಾಗುವ ಸಂಭವವಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

