Friday, December 27, 2024

Latest Posts

ಪಲಾವ್, ಅನ್ನಕ್ಕೆ ಮ್ಯಾಚ್ ಆಗುವಂಥ ಬೀಟ್ರೂಟ್ ಪಚಡಿ ರೆಸಿಪಿ

- Advertisement -

Recipe: ಸೌತೇಕಾಯಿ, ಈರುಳ್ಳಿ ಬಳಸಿ ಪಚಡಿ ತಯಾರಿಸಿರುತ್ತೀರಿ. ಆದರೆ ಬೀಟ್ರೂಟ್ ಪಚಡಿ ತಯಾರಿಸುವದು ಬಹು ಅಪರೂಪ. ಹಾಗಾಗಿ ನಾವಿಂದು ಬೀಟ್‌ರೂಟ್ ಪಚಡಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲು ಒಂದು ಕಪ್ ಕಾಯಿ ತುರಿ, ಅರ್ಧ ಸ್ಪೂನ್ ಸಾಸಿವೆ, ಜೀರಿಗೆ, ಚಿಕ್ಕ ತುಂಡು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಇವಿಷ್ಟನ್ನನು ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ ಒಂದು ತುರಿದ ಬೀಟ್‌ರೂಟ್, ಎರಡು ಸ್ಪೂನ್ ಮೊಸರು, ಉಪ್ಪು ಮತ್ತು ರುಬ್ಬಿಕೊಂಡ ಮಿಶ್ರಣ ಹಾಕಿ ಮಿಕ್ಸ್ ಮಾಡಿ. ಒಗ್ಗರಣೆ ಸೌಟಿಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು, ಉದ್ದಿನ ಬೇಳೆ ಹಾಕಿ ಒಗ್ಗರಣೆ ಕೊಟ್ರೆ, ಬೀಟ್ರೂಟ್ ಪಚಡಿ ರೆಡಿ.ಇದನ್ನು ನೀವು ಅನ್ನ, ಪಲಾವ್ ಜೊತೆ ಸವಿಯಬಹುದು.

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss