Bengaluru News: ಬೆಂಗಳೂರು: ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ಶಾಕ್ ಪ್ರೀಯರಿಗೆ ಬಿಗ್ ಶಾಕ್ ಒಂದು ಕಾದಿದೆ. ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಎಣ್ಣೆ (Liquor) ಸಿಗೋದಿಲ್ಲ. ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗುತ್ತಿದ್ದು, ಮದ್ಯ ಪ್ರಿಯರು ಈ ತಿಂಗಳಾಂತ್ಯದಲ್ಲೇ ಸ್ಟಾಕ್ ಮಾಡಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ನಡೆಯುತ್ತಿರೋ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ (Lok Sabha Elections Result) ಇರೋದ್ರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನ ಬಂದ್ ಮಾಡುವಂತೆ ಆದೇಶ ನೀಡಿದೆ.
ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3 ರವರೆಗೆ ಬಂದ್ ಮಾಡಬೇಕಾಗುತ್ತೆ. ಇನ್ನೂ ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.
ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದೂ ಸಹ ಬಾರ್ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ ಜೂನ್ ತಿಂಗಳ ಮೊದಲ ವಾರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ.
ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ
ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ
ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ