Saturday, July 27, 2024

Latest Posts

ಗರ್ಭಿಣಿಗೆ ವಿಷ ಹಾಕಿದ ಸಹೋದ್ಯೋಗಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

- Advertisement -

International News: ಚೀನಾದ ನಗರವೊಂದರಲ್ಲಿ ಈ ಘಟನೆ ನಡೆದಿದ್ದು, ಸಹೋದ್ಯೋಗಿಯೊಬ್ಬಳು ಗರ್ಭಿಣಿಗೆ ವಿಷ ಹಾಕಿದ್ದಾಳೆ. ಆಕೆ ಕುಡಿಯುವ ನೀರಿಗೆ ವಿಷಪೂರಿತ ಪುಡಿ ಬೆರೆಸಿ, ಗರ್ಭಿಣಿಗೆ ನೀಡಿದ್ದಾಳೆ. ಅದೃಷ್ಟವಶಾತ್ ಪೂರ್ತಿ ನೀರನ್ನು ಕುಡಿಯದ ಗರ್ಭಿಣಿ ಕೊಂಚ ನೀರು ಕುಡಿದು ಟೇಸ್ಟ್ ಕಂಡು ನೀರನ್ನು ಚೆಲ್ಲಿದ್ದಾಳೆ.

ಬಳಿಕ ಆಫೀಸಿನಲ್ಲಿ ಹೋಗಿ, ನೀರು ಕಲುಶಿತವಾಗಿರಬಹುದೆಂದು ದೂರು ಹೇಳಿದ್ದಾರೆ. ಆದರೆ ಆಫೀಸಿನಲ್ಲಿ ಸಿಗುವ ನೀರು ಆರೋಗ್ಯಕರವಾಗೇ ಇತ್ತು. ಆಗ ವಿಷಯ ಏನೆಂದು ತಿಳಿಯಲು, ಸ್ಥಳದಲ್ಲೇ ಇದ್ದ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಆಗ ಆಕೆಯ ಸಹೋದ್ಯೋಗಿಯೇ ಆಕೆ ಕುಡಿಯುವ ನೀರಿಗೆ ವಿಷ ಬೆರೆಸಿದ್ದು, ತಿಳಿದು ಬಂದಿದೆ.

ಹಾಾಗಾದ್ರೆ ಸಹೋದ್ಯೋಗಿಯೇ ಯಾಕೆ ಗರ್ಭಿಣಿಗೆ ವಿಷ ಬೆರೆಸಿದ್ಲು ಅಂತಾ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಗರ್ಭಾವಸ್ಥೆಯಲ್ಲಿದ್ದಾಗ, 9 ತಿಂಗಳು ಕೆಲಸ ಮಾಡಿ, 6 ತಿಂಗಳು ಬಾಣಂತನಕ್ಕಾಗಿ ರಜೆ ಕೊಡಲಾಗುತ್ತದೆ. ಈ ರಜೆಯಲ್ಲಿ ತಾಯಿ ತನ್ನ ಮಗುವಿನೊಂದಿಗೆ ಯಾವುದೇ ಒತ್ತಡವಿಲ್ಲದೇ, ಹಾಯಾಗಿ ಸಮಯ ಕಳಿಯಲಿ ಎಂದು ಕೆಲಸವಿಲ್ಲದೇ, ಅವರಿಗೆ ಸ್ಯಾಲರಿ ಸಹ ನೀಡಲಾಗುತ್ತದೆ.

ಇಂಥ ಸಮಯದಲ್ಲಿ ತನಗೆ ಕೆಲಸದ ಭಾರ ಬೀಳುತ್ತದೆ. ಈಕೆಯ ಮಗು ಹೋದರೆ, ಈಕೆ ಒಂದು ತಿಂಗಳಲ್ಲೇ ಆಫೀಸಿಗೆ ಬಂದು ಕೆಲಸ ಮಾಡುತ್ತಾಳೆ. ಆಗ ತನ್ನ ಕೆಲಸದ ಭಾರ ಕಡಿಮೆಯಾಗುತ್ತದೆ ಎಂಬ ಕುತಂತ್ರ ಬುದ್ಧಿಯಿಂದ ಈಕೆ, ಗರ್ಭಿಣಿಗೆ ವಿಷ ಹಾಕಿದ್ದಾಳೆ. ಸಿಸಿಟಿವಿಯಲ್ಲಿ ಈ ದೃಷ್ಯ ಸೆರೆಯಾಗಿದ್ದು, ಆಕೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss