Rangoli Garden: ಬೆಂಗಳೂರು ಅಂದ್ರೆ, 24 ತಾಸು ದುಡಿಮೆ, ಟ್ರಾಫಿಕ್ ಜಾಮ್, ಜನಜಂಗುಳಿ. ಇವಿಷ್ಟೆ ಬೇರೆಯವರಿಗೆ ಕಾಣೋದು. ಆದರೆ ವಿಕೇಂಡ್‌ನಲ್ಲಿ ರಿಲ್ಯಾಕ್ಸ್ ಮಾಡೋಕ್ಕೆ ಅಂತಾನೇ ಬೆಂಗಳೂರಿನಲ್ಲಿ ಬೇಕಾದಷ್ಟು ಸ್ಪಾಟ್‌ಗಳಿದೆ. ಅದರಲ್ಲಿ ನಾವಿಂದು ಯಾವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೆವೋ, ಆ ಸ್ಥಳ ಹಳ್ಳಿಯ ಫೀಲಿಂಗ್ ಕೊಡಲಿದೆ. ಹಾಗಾದ್ರೆ ಆ ಸ್ಪಾಟ್ ಯಾವುದು ಅಂತಾ ತಿಳಿಯೋಣ ಬನ್ನಿ..
ಬೆಂಗಳೂರಿನಲ್ಲಿರುವ ರಂಗೋಲಿ ಗಾರ್ಡೆನ್‌ನಲ್ಲಿ ಈ ಹಳ್ಳಿ ಸೊಗಡಿನ ವಾತಾವರಣವನ್ನು ನೀವು ನೋಡಬಹುದು. ಇಲ್ಲಿ ಎಂಟ್ರಿ ಕೊಡಬೇಕು ಅಂದ್ರೆ ನೀವು ನೂರಾ ಐವತ್ತು ರೂಪಾಯಿ ಕೊಡಬೇಕು. ಇಬ್ಬರಿಗಾದರೆ, ಮುನ್ನೂರು ರೂಪಾಯಿ ಕೊಡಬೇಕಾಗುತ್ತದೆ. ಇದು ವೀಕ್ ಡೇಸ್‌ನಲ್ಲಿ ಮಾತ್ರ. ಅದೇ ನೀವು ಶನಿವಾರ, ಭಾನುವಾರ, ಸರ್ಕಾರಿ ರಜೆ ಇರುವ ಸಂದರ್ಭದಲ್ಲಿ ಹೋದಾಗ, ದೊಡ್ಡವರಿಗೆ ಇನ್ನೂರು ರೂಪಾಯಿ ಚಾರ್ಜ್ ಇರುತ್ತದೆ. ಚಿಕ್ಕವರಿಗೆ ನೂರು ರೂಪಾಯಿ ಇರುತ್ತದೆ. ಇದಕ್ಕಾಗಿ ನಿಮಗೆ ಬ್ಯಾಂಡ್ ಕೂಡ ಕೊಡಲಾಗುತ್ತದೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ರಂಗೋಲಿ ಗಾರ್ಡೆನ್ ಓಪೆನ್ ಆಗಿರುತ್ತದೆ. ಇಲ್ಲಿ ಹಳ್ಳಿ ಜೀವನದಲ್ಲಿ ಮನುಷ್ಯ ಏನೇನು ಮಾಡಬಹುದೋ, ಅವುಗಳ ಗೊಂಬೆ ಮಾಡಿ ಇಡಲಾಗಿದೆ. ದನ ಮೇಯಿಸುವುದು, ಕುರಿ ಮೇಯಿಸುವುದು, ಹಳ್ಳಿ ಹೆಂಗಸರು ಹರಟೆ ಹೊಡಿಯುವುದು, ಹಳ್ಳಿ ಜನರಂತೆ ಅಡುಗೆ ಮಾಡುವುದು, ಆಟವಾಡುವ ಮಕ್ಕಳು. ಜಾತಿ ಬೇಧವಿಲ್ಲದೇ, ಹರಟೆ ಕಟ್ಟೆ ಮೇಲೆ ಕೂತು ಹರಟುವ ಜನ ಹೀಗೆ ಎಲ್ಲ ರೀತಿಯ ಗೊಂಬೆಗಳು ನಿಮಗಿಲ್ಲಿ ಕಾಣ ಸಿಗುತ್ತದೆ.
ಅಲ್ಲದೇ, ಹಳ್ಳಿಗಳಲ್ಲಿ ಇರುವಂಥ ಮನೆ, ತೊಟ್ಟಿಲು, ಎಲ್ಲವನ್ನೂ ನೀವಿಲ್ಲಿ ಕಾಣಬಹುದು. ಅಲ್ಲದೇ, ಹಳ್ಳಿಗಳಲ್ಲಿ ಆಡುವಂಥ ಆಟ, ಕಂಬಳ, ಮನೆ ಮನೆಗೆ ಬರುವ ಜೋಗತಿ, ಬುಡಬುಡ್ಕೆ ಇವೆಲ್ಲದ ಗೊಂಬೆಗಳನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು. ಹಸಿವಾದಾಗ, ಊಟ ಮಾಡೋಕ್ಕೂ ಇಲ್ಲಿ ಹಳ್ಳಿ ಅಂಗಡಿ ಇದೆ. ಅಲ್ಲಿ ನಿಮಗೆ ಹಳ್ಳಿಯಲ್ಲಿ ಸಿಗುವಂಥ ಊಟವೂ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?