Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ ಇಲ್ಲದೇ, ಯಾವ ಸ್ಥಳಗಳಿಗೆ ಹೋಗಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪತ್ನಿಯಾದವಳು ಪತಿಯ ಒಪ್ಪಿಗೆ ಪಡೆಯದೇ, ಸಂಜೆ ಬಳಿಕ ಎಲ್ಲಿಯೂ ಹೋಗಬಾರದು. ಹೆಣ್ಣು ಎಷ್ಟೇ ಮುಂದುವರಿದಿರಬಹುದು. ಸಮಾಜ ಎಷ್ಟೇ ಅಭಿವೃದ್ಧಿಯಾಗಿರಬಹುದು. ಆದರೂ ಹೆಣ್ಣು ಪತಿಯ ರಕ್ಷಣೆಯಲ್ಲಿರಬೇಕು. ಅದಕ್ಕಾಗಿ ಆಕೆಗೆ ಸಂಜೆ ಬಳಿಕ ಎಲ್ಲೇ ಹೋಗುವುದಿದ್ದರೂ, ಪತಿಯ ಒಪ್ಪಿಗೆ ಅಥವಾ, ಪತಿಯ ಸಾಥ್ ಬೇಕು. ಯಾಕಂದ್ರೆ ಕುಡುಕರು, ಕಾಮುಕರ ಹಾವಳಿ ಎಂದಿಗೂ ಕಡಿಮೆಯಾಗುವುದಿಲ್ಲ.
ಪತ್ನಿಯಾದವಳು ಪತಿಯ ಒಪ್ಪಿಗೆ ಇಲ್ಲದೇ, ಯಾವುದೇ ದೊಡ್ಡ ಮನುಷ್ಯರ ಮನೆಗೆ ಹೋಗಬಾರದು. ಪೊಲೀಸ್ ಅಧಿಕಾರಿ, ರಾಜಕೀಯ ವ್ಯಕ್ತಿ ಹೀಗೆ ದೊಡ್ಡ ದೊಡ್ಡ ಅಧಿಕಾರಿಗಳನ್ನು ಭೇಟಿಯಾಗುವುದಕ್ಕೆ, ಹೆಣ್ಣು ಎಂದಿಗೂ ಒಬ್ಬಳೇ ಹೋಗಬಾರದು. ಪತಿಯ ಜೊತೆಯೇ ಹೋಗಬೇಕು. ಇಲ್ಲವಾದಲ್ಲಿ ಮಾನಹಾನಿಯಾಗುವ ಸಾಧ್ಯತೆ ಇರುತ್ತದೆ.
ಇನ್ನು ಕೊನೆಯದಾಗಿ ಪತ್ನಿಯಾದವಳು ಪತಿಯ ಒಪ್ಪಿಗೆ ಇಲ್ಲದೇ, ತವರಿಗೆ ಹೋಗಬಾರದು. ಪತ್ನಿಯನ್ನು ಪತಿಯೇ ಖುಷಿ ಖುಷಿಯಾಗಿ, ಪ್ರೀತಿಯಿಂದ ತವರಿಗೆ ಬಿಟ್ಟು ಕೊಡಬೇಕು. ಮತ್ತು ಕರೆತರಬೇಕು. ಆಗಲೇ ಪತಿಯ ಮನೆ ಮತ್ತು ತವರು ಮನೆಯವರಿಗೆ ಗೌರವವಿರುತ್ತದೆ.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..