International News: ಸಾಮಾನ್ಯವಾಗಿ ನಮಗೆ ಶೀತ ನೆಗಡಿ ಬಂದರೆ, ನಾವು ಭಾರತೀಯರು ಮನೆಯಲ್ಲಿಯೇ ಇರುವ ಡೋಲೋ ಅಥವಾ ಯಾವುದಾದರೂ ಶೀತ-ಕೆಮ್ಮಿನ ಮಾತ್ರೆ ತೆಗೆದುಕೊಳ್ಳುತ್ತೇವೆ. ಕಶಾಯ, ತುಳಸಿ ರಸ, ಶುಂಠಿ-ಜೇನುತುಪ್ಪ ಹೀಗೆ ಹಲವು ಮದ್ದು ಮಾಡಿಕೊಳ್ಳುತ್ತೇವೆ. ಏನೇ ಮಾಡಿದರೂ ವಾಸಿಯಾಗದಿದ್ದಲ್ಲಿ, ಆಸ್ಪತ್ರೆಗೆ ಹೋಗುತ್ತೇವೆ.
ಅದೇ ರೀತಿ ವಿದೇಶದಲ್ಲಿ ಓರ್ವ ಮಹಿಳೆ ಶೀತ-ಕೆಮ್ಮು ಬಂತೆಂದು ಮನೆಯಲ್ಲೇ ಇದ್ದ ಯಾವುದೇ ಮಾತ್ರೆ ಸೇವನೆ ಮಾಡಿದ್ದಾಳೆ. ಬಳಿಕ ಆಕೆಯ ಕಣ್ಣಿಂದ ರಕ್ತ ಬಂದಿದೆ. ಕಣ್ಣು, ಮುಖವೆಲ್ಲ ಊದಿಕೊಂಡಿದೆ. ಚರ್ಮದ ಸೋಂಕು ಉಂಟಾಗಿದೆ. ಮುಖದ ಮೇಲೆ ಹಳದಿ ಪದರ ಬರಲು ಶುರುವಾಗಿದೆ. ಆಸ್ಪತ್ರೆಗೆ ಹೋದಾಗ, ಆಕೆ ವೈದ್ಯರ ಸಲಹೆ ಇಲ್ಲದ, ಯಾವುದೋ ಮಾತ್ರೆ ತೆಗೆದುಕೊಂಡು ಎಡವಟ್ಟುವ ಮಾಡಿಕೊಂಡಿದ್ದಾಳೆ.
ಇರಾಕ್‌ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಯನ್ನು ಐಸಿಯುನಲ್ಲಿರಿಸಿ, ಗಂಟಲಿಗೆ ಟ್ಯೂಬ್ ಅಳವಡಿಸಲಾಗಿದೆ. ಏನನ್ನೂ ತಿನ್ನಲು, ಕುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆ ಮಹಿಳೆ ಇದ್ದಾಳೆ. ಹಾಗಾಗಿಯೇ ವೈದ್ಯರ ಸಲಹೆ ಇಲ್ಲದೇ, ನೀವೇ ಮಾತ್ರಗಳನ್ನು ಸೇವಿಸಬಾರದು ಅಂತಾ ಹೇಳುವುದು.
ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು
ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು