Tuesday, April 30, 2024

Latest Posts

ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು

- Advertisement -

Hassan News: ಹಾಸನ: ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ಹಾಸನದಲ್ಲಿ ಅದ್ಭುತವಾಗಿ ಪ್ರಚಾರ ನಡೆಯುತ್ತಿದೆ. ಹೆಣ್ಣು ಮಕ್ಕಳೇ ಸ್ವಯಂಸ್ಪೂರ್ತಿಯಿಂದ ಬಂದು ಪ್ತಚಾರ ಮಾಡ್ತಾ ಇದ್ದಾರೆ. ಖಂಡಿತಾ ನೂರಕ್ಕೆ ನೂರು ದೇವರು ಫಲ ಕೊಡೊ ವಿಶ್ವಾಸ ಇದೆ. ಇಂದು ಕುಮಾರಣ್ಣ ಚನ್ನರಾಯಪಟ್ಟಣ ದಲ್ಲಿ ರೋಡ್ ಶೋ ಹಾಗು ಬೃಹತ್ ಸಭೆ ನಡೆಸುತ್ತಾರೆ. ಕೇಂದ್ರ ಸಚಿವರು ನಾರಾಯಣಸ್ವಾಮಿ ಹಾಗು ಮಾಜಿ ಸಚಿವ ಮಾಧುಸ್ಚಾಮಿ ಅವರು ನನ್ನೊಟ್ಟಿಗೆ ಪ್ರಚಾರ ನಡೆಸುತ್ತಾರೆ. ನರೇಂದ್ರ ಮೋದಿಯವರು 20 ಅಥವಾ 21 ಕ್ಕೆ ನರೇಂದ್ರ ಮೋದಿಯವರು ಚಿಕ್ಕಬಳ್ಳಾಪುರ ಹಾಗು ಇತರೆಡೆ ಪ್ರವಾಸ ಇದೆ ಎಂದು ಹೇಳಿದ್ದಾರೆ. ಅವರ ಪ್ರವಾಸ ನೋಡಿಕೊಂಡು ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯಲ್ಲಿ ಪ್ರಚಾರ ಮಾಡ್ತಾರೆ ಎಂದು ಪ್ರಜ್ವಲ್ ಹೇಳಿದ್ದಾರೆ.

ಮೋದಿಯವರ ಪ್ರವಾಸ ಕಾರ್ಯಕ್ರಮ ಇನ್ನು ಅಂತಿಮ ಆಗಿಲ್ಲ. ಚಿಕ್ಕಬಳ್ಳಾಪುರ, ಅರಸೀಕೆರೆ ತುಮಕೂರು ಸೇರಿ ನಾಲ್ಕು ಸ್ಥಳದಲ್ಲಿ ಕಾರ್ಯಕ್ರಮ ನಡೆಸೋ ಬಗ್ಗೆ ಚರ್ಚೆ ಆಗ್ತಿದೆ.. ನಾವೂ ಕೂಡ ಅರಸೀಕೆರೆ ಗೆ ಬಂದರೆ ಚಿತ್ರದುರ್ಗ , ತುಮಕೂರು ಹಾಸನ ಕವರ್ ಆಗುತ್ತದೆ ಎಂದು ಹೇಳಿದ್ದೇವೆ. ಅವರ ಪ್ರವಾಸ ಅಂತಿಮ ಆದಾಗ ಗೊತ್ತಾಗಲಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಅವರು ಬಂದಿದ್ದು ಗೊತ್ತಾಗಲ್ಲ ಹೋಗಿದ್ದು ಗೊತ್ತಾಗಲ್ಲ. ರಾಹುಲ್ ಗಾಂಧಿ ಬಂದರೆ ನಾನೂರು ಅಲ್ಲ, ಐನೂರು ಸ್ಥಾನ ಗೆಲ್ತೇವೆ. ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರು ಮೋದಿಯವರು ಮೂರನೆ ಬಾರಿಗೆ ಗೆಲ್ಲಬೇಕು ಎಂದು ಜನರು ಬಯಸಿದ್ದಾರೆ. ಹಾಗಾಗಿ ಅವರ ಸಹಕಾರ ದೊಂದಿಗೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಪ್ರಜ್ವಲ್ ಹೇಳಿದ್ದಾರೆ.

ಮಂಡ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿರುವ ಪ್ರಜ್ವಲ್, ಅವರು ಬಂದ ಕೂಡಲೆ ಬದಲಾಗುತ್ತೆ ಎನ್ನೋದು ಸುಳ್ಳು. ರಾಹುಲ್ ಗಾಂಧಿ ವರ್ಚಸ್ಸು ದಿನೇ ದಿನೆ ಕಡಿಮೆ ಆಗ್ತಿದೆ. ಅವರ ನಡವಳಿಕೆ , ಯೋಜನೆ,ಯೋಚನೆ ದೇಶಕ್ಕೆ ಪೂರಕವಾಗಿಲ್ಲ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ಲ ಎನ್ನೋ ಪರಿಸ್ಥಿತಿ ಇಲ್ಲ. ರಾಜ್ಯಕ್ಕೆ ಯಾರು ಬೇಕು ದೇಶಕ್ಕೆ ಯಾರು ಬೇಕು ಎಂದು ಜನರು ಯೋಚನೆ ಮಾಡ್ತಾರೆ. ಮುಂದಿನ ದಿನಗಳಲ್ಲಿ ಈ ರಾಜ್ಯ ಸರ್ಕಾರದ ವಿರುದ್ದ ನಿಲ್ಲೋ ಕಾಲ ಬರುತ್ತೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಮೆರವಣಿಗೆ ಮೂಲಕ ಕಾಂಗ್ರೆಸ್ ಶಕ್ತಿಪ್ರದರ್ಶನ: ನಾಮಪತ್ರ ಸಲ್ಲಿಸಿದ ವಿನೋದ್ ಅಸೂಟಿ

ಜೋಶಿ ಅವರು ಬರೀ ಕಥೆ ಕಟ್ಟುತ್ತಾರೆ. ಬೇರೆಯವರ ಹೆಗಲ ಮೆಲೆ ಬಂದೂಕು ಇಟ್ಟು ಹೊಡೆಯುತ್ತಾರೆ: ಲಾಡ್

ಮೋದಿ‌ ಸ್ವರ್ಗ ತೋರಿಸುತ್ತೇನೆ ಎಂದು ನರಕ ತೋರಿಸಿದ್ದಾರೆ: ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್

- Advertisement -

Latest Posts

Don't Miss